ಕಡಬದಲ್ಲಿ ಶಾಸಕ ಭರತ್ ಶೆಟ್ಟಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ನೀವೆಲ್ಲ ಬಿಜೆಪಿಯಲ್ಲಿ ಇದ್ದಿರಲ್ಲ ಗಾಂಧೀಜಿ ಕೊಂದ ಗೋಡ್ಸೆ ಪೀಳಿಗೆಯವರು

ಕಡಬದಲ್ಲಿ ಶಾಸಕ ಭರತ್ ಶೆಟ್ಟಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ನೀವೆಲ್ಲ ಬಿಜೆಪಿಯಲ್ಲಿ ಇದ್ದಿರಲ್ಲ ಗಾಂಧೀಜಿ ಕೊಂದ ಗೋಡ್ಸೆ ಪೀಳಿಗೆಯವರು

Kadaba Times News

ಕಡಬ ಟೈಮ್ಸ್,  ದೇಶದ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ , ಧರ್ಮ ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟೀಸಿ ರಾಷ್ಟ್ರದ  ಸಾಮರಸ್ಯೆಕ್ಕೆ ತೊಡುಕು ಉಂಟು ಮಾಡುವ ಆರ್‌ಎಸ್ ಎಸ್ ಹಾಗೂ ಬಿಜೆಪಿಯವರ ಹಿಂದುತ್ವ ಈ ದೇಶಕ್ಕೆ ಬೇಡ, ಜಾತ್ಯಾತೀತ ಪರಂಪರೆಯ ಸರ್ವರನ್ನು ಸಮಭಾವದಿಂದ ಕಾಣುವ ಹಿಂದುತ್ವ ಬೇಕು ಎಂದು ಕೆ.ಪಿ.ಸಿ.ಸಿ ವಕ್ತಾರ ಕಡಬ ಕಾಂಗ್ರೇಸ್ ಸಂಯೋಜಕ ಎ.ಸಿ.ವಿನಯ ರಾಜ್ ಹೇಳಿದರು.



 ಅವರು ಬುಧವಾರ  ಕಡಬದಲ್ಲಿ ಕಡಬ ಕಾಂಗ್ರೇಸ್ ವತಿಯಿಂದ ರಾಹುಲ್ ಗಾಂಧಿ  ಬಗ್ಗೆ  ಡಾ|ವೈ ಭರತ್ ಶೆಟ್ಟಿಯವರು ನೀಡಿರುವ ಹೇಳಿಕೆಯ ವಿರುದ್ಧ ನಡೆದ ರಸ್ತೆ  ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.   ಹಿಂದುತ್ವದ ಹೆಸರೇಳಿಕೊಂಡು ದೇಶದ ಜನರಲ್ಲಿ ದ್ವೇಷ ಅಸೂಯೆ ಮೂಡಿಸುವ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಯವರಿಗೆ  ರಾಹುಲ್ ಗಾಂಧಿಯವರು ಲೋಕ ಸಭೆಯಲ್ಲಿ ಚಾಟಿ ಬೀಸಿದ್ದಾರೆ. ಅದನ್ನು ಈಗ ರಾಜಕೀಯ ಅಸ್ತ್ರ ವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ, ಇದು ನಡೆಯುವುದಿಲ್ಲ.  ರಾಹುಲ್ ಗಾಂಧಿಯವರ ವಿರುದ್ಧ ಅವಹೇಳನವಾಗಿ ಮಾತನಾಡುವ ಇಲ್ಲಿನ ಶಾಸಕರು ತುಳುನಾಡ ಸೃಷ್ಠಿಕರ್ತ ಪರಶುರಾಮ ತೀಮ್ ಪಾರ್ಕ್ನಲ್ಲಿ ಅಷ್ಟೊಂದು ಅವ್ಯವಹಾರ ನಡೆಯುವಾಗ, ವಿಧಾನ ಸಭೆಯಲ್ಲಿ ಸಚಿವ ಮಾಧು ಸ್ವಾಮಿ ತುಳುನಾಡ ದೈವಗಳ ಬಗ್ಗೆ ಅವಹೇಳನವಾಗಿ ಮಾತನಾಡುವಾಗ ಸುಮ್ಮನಿದ್ದ ಇಲ್ಲಿನ ಶಾಸಕರು ಈಗ ನಾಲಗೆ ಹರಿಬಿಟ್ಟಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.




ಸುಳ್ಯ ವಿಧಾನಸಭಾ ಕ್ಷೇತ್ರದ ಕೆ.ಪಿ.ಸಿ.ಸಿ ಉಸ್ತುವಾರಿ ಎಂ.ಎಸ್.ಮಹಮ್ಮದ್ ಮಾತನಾಡಿ ಈ ದೇಶವನ್ನಾಳಿದ ಶ್ರೀಮಂತ ಮನೆತನದ ನೆಹರು ಕುಟುಂಬ ತಮ್ಮೆಲ್ಲಾ ಸಂಪತ್ತನ್ನು ಈ ದೇಶಕ್ಕಾಗಿ ಸಮರ್ಪಿಸಿರುವುದಲ್ಲದೆ, ದೇಶಕ್ಕಾ ಪ್ರಾಣ ತ್ಯಾಗ ಮಾಡಿದ್ದಾರೆ ಅಂತಹ ವಂಶದ ರಾಹುಲ್ ಗಾಂಧಿಯವರ ಬಗ್ಗೆ ಹಗುರವಾಗಿ ಮಾತನಾಡು ಬಿಜೆಪಿಗರಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ. ಇವರು ಅಧಿಕಾರದ ಮದದಿಂದ ರಾಹುಲ್ ಗಾಂಧಿಯವರನ್ನು ಲೋಕ ಸಭೆಯಿಂದ ಹೊರ ಹಾಕುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿ ತಳದಿದ್ದರು,  ಆದರೆ ರಾಹುಲ್ ಗಾಂಧಿಯವರು ಕಳೆದ ಲೋಕಸಭಾ ಚುನಾಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿ ಲೋಕಸಭೆಯ ವಿಪಕ್ಷ ನಾಯಕರಾಗಿ ಈಗ ಛಾಯಾ ಪ್ರಧಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯವರು ಅನಗತ್ಯ ಹೇಳಿಕೆಗಳನ್ನು ನೀಡುತ್ತ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದಾರೆ ಎಂದು ಆರೋಪಿಸಿದಲ್ಲದೆ ನೀವೆಲ್ಲ ಬಿಜೆಪಿಯಲ್ಲಿ ಇದ್ದಿರಲ್ಲ ಗಾಂಧಿ ಕೊಂದ ಗೋಡ್ಸೆ ಪೀಳಿಗೆಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.



ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿದರು. ಹಲವು ಕಾಂಗ್ರೇಸ್ ಮುಖಂಡರು,ಕಾರ್ಯಕರ್ತರು ಭಾಗವಹಿಸಿದ್ದರು.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top