




ಕಡಬ ಪಟ್ಟಣ: ಇದೀಗ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕ ಮಡಿವಾಳ್ತಿ ಪರಪ್ಪು ರಸ್ತೆಯಲ್ಲಿ ನೀರು ಹರಿದು ಹೋಗಿ ರಸ್ತೆಯು ತೋಡಿನಂತಾಗಿತ್ತು.ಚರಂಡಿಯನ್ನಾದರೂ ಸರಿಪಡಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದರು. ಈ ಬಗ್ಗೆ ಕಡಬ ಟೈಮ್ ಜುಲೈ.18ರಂದು ಮುಂಜಾನೆ ವರದಿ ಪ್ರಕಟಿಸಿತ್ತು.
ಈ ಸುದ್ದಿ ಓದಿರಿ: ಕಡಬಪಟ್ಟಣ ಪಂಚಾಯತ್ ವ್ಯಾಪ್ತಿ: ಮಳೆ ಇಲ್ಲದಿರುವಾಗ ರೋಡು, ಮಳೆ ಬಂದಾಗ ತೋಡು:ಕನಿಷ್ಟ ಚರಂಡಿ ಸರಿ ಮಾಡಿಕೊಡಿಎನ್ನುತ್ತಿರುವ ಜನರು
ಇದೀಗ
ವರದಿ ಬೆನ್ನಲ್ಲೇ ಕಡಬ ಪಟ್ಟಣ ಪಂಚಾಯತ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಚರಂಡಿ ದುರಸ್ತಿ
ಪಡಿಸಲು ಜೆಸಿಬಿ ಬಂದಿದ್ದು ಕೆಲಸ ಪ್ರಗತಿಯಲ್ಲಿರುವುದಾಗಿ
ಮಾಹಿತಿ ಲಭಿಸಿದೆ. ಸ್ಥಳಕ್ಕೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಹರೀಶ್ ಬೆದ್ರಾಜೆ,ಗುರು
ಪ್ರಸಾದ್ ಮತ್ತಿತ್ತರರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿರುವುದಾಗಿ ತಿಳಿದು ಬಂದಿದೆ.
ಮುಖ್ಯ ರಸ್ತೆಯಿಂದ ಮೋರಿ
ಮೂಲಕ ಬರುವ ನೀರು ಈ ರಸ್ತೆಯಲ್ಲಿರುವ
ಕಿರಿದಾದ ಚರಂಡಿಯನ್ನು ಸೇರಿಕೊಳ್ಳುತ್ತಿತ್ತು . ಈ ರಸ್ತೆಯ ಚರಂಡಿಗಳಲ್ಲಿ
ಗಿಡಗಂಟಿಗಳಿಂದ ಆವೃತವಾಗಿತ್ತು ಜೋರು ಮಳೆ ಸುರಿಯುವ ಸಂದರ್ಭದಲ್ಲಿ
ಈ ರಸ್ತೆ ಸಂಪೂರ್ಣ ತೋಡಿನಂತಾಗಿ
ಬದಲಾಗುತ್ತಿತ್ತು.ಪಟ್ಟಣ ಪಂಚಾಯತ್
ನ ತ್ವರಿತ ಕ್ರಮವನ್ನು ಅಲ್ಲಿನ ನಿವಾಸಿಗಳು ಶ್ಲಾಘಿಸಿದ್ದಾರೆ.