




ಕಡಬ: ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಎಡೆಬಿಡದೆ ಮಳೆ ಮುಂದುವರಿದ ಪರಿಣಾಮ ಜಿಲ್ಲೆಯ ಜೀವ ನದಿ ನೇತ್ರಾವತಿ ಮತ್ತು ಕುಮಾರಧಾರ ,ಗುಂಡ್ಯ ನದಿಗಳು ತುಂಬಿ ಉಕ್ಕಿ ಹರಿಯತೊಡಗಿದೆ.
ಅದರಲ್ಲೂ
ಘಟ್ಟದ ಮೇಲೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಗುಂಡ್ಯ ಹೊಳೆಯಲ್ಲಿ ನೆರೆ ನೀರಿನ ಮಟ್ಟ ಏರಿಕೆಯಾಗಿದೆ. ಬುಧವಾರ ಸಂಜೆ ವೇಳೆಗೆ
ಕಡಬ ಸಮೀಪದ ಹೊಸ್ಮಠ ಸೇತುವೆ ಬಳಿ ಮೊದಲ ಬಾರಿಗೆ ಅಧಿಕ ನೀರು ಬಂದಿರುವ
ಬಗ್ಗೆ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ .ಇನ್ನು ವಾಹನ ಸವಾರರು, ಸಾರ್ವಜನಿಕರು ಸೇತುವೆ ಬಳಿ
ನಿಂತು ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಸುಬ್ರಹ್ಮಣ್ಯ ಮತ್ತು ಕಡಬದ ಹೊಸಮಠದಲ್ಲಿ ಹೊಸ ಸೇತುವೆ ಆದ ಬಳಿಕ ಮುಗುಳು ಸೇತುವೆಗೆ ಮುಕ್ತಿ ದೊರಕಿತ್ತು. ಆದರೆ ಜನರು ಮಾತ್ರ ಇನ್ನೂ ಮರೆತಿಲ್ಲ. ಅಧಿಕ ನೀರು ಇರುವುದನ್ನು ಕಂಡು ಅಂದು ಮುಳುಗಡೆಯಾಗಿ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ಮೆಲುಕು ಹಾಕುತ್ತಿದ್ದಾರೆ.ಮುಖ್ಯವಾಗಿ ಅಧಿಕ ಮಳೆಯಾಗಿ ಸೇತುವೆ ಮುಳುಗಡೆ ಆದ ಸಮಯ ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತಿತ್ತು.
ಕೆಲ ದಿನಗಳಿಂದ ಸುರಿಯುವ ಮಳೆಗೆ ನೇತ್ರಾವತಿ, ಗುಂಡ್ಯ ಮತ್ತು ಕುಮಾರಧಾರ ನದಿ ತಟದ ಕೃಷಿ ತೋಟಗಳು ಜಲಾವೃತವಾಗಿದೆ .