




ಸುಳ್ಯ: ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಮೈಲ್ ತುತ್ತು ಬ್ಯಾಗ್ ಗಳನ್ನು ಕೃಷಿ ಅಧಿಕಾರಿಗಳು ವಶಪಡಿಸಿಕೊಂಡ ಅಪರೂಪದ ವಿದ್ಯಮಾನವೊಂದು ಸುಳ್ಯದ ಕನಕಮಜಲು ಗ್ರಾಮದಿಂದ ವರದಿಯಾಗಿದೆ.
ಕನಕಮಜಲು ಗ್ರಾಮದ ಸುಣ್ಣಮೂಲೆಯ ಗೋಡಾನ್ ನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 347 ಬ್ಯಾಗ್ ಮೈಲ್ ತುತ್ತನ್ನು ವಶಕೆ ಪಡೆಯಲಾಗಿದೆ.
ಈ ವೇಳೆ ಯಾವುದೇ ಪರವಾನಿಗೆ ಇಲ್ಲದೆ ಇರುವುದು ಕಂಡು ಬಂದಿದೆ. ಖಚಿತ ಮಾಹಿತಿ ಮೇರೆಗೆ ಸುಳ್ಯದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹಾಗೂ ಜಾರಿದಳದ ಸಹಾಯಕ ಕೃಷಿ ನಿರ್ದೇಶಕಿ ರಶ್ಮಿ ಇವರ ಜಿಲ್ಲಾ ತಂಡದವರು ದಾಳಿ ನಡೆಸಿರುವುದಾಗಿ ವರದಿಯಾಗಿದೆ.