




ಪಂಜ : ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದ್ದು, ಪಿಕಪ್ ವಾಹನ, ಪಿಕಪ್ ಚಾಲಕ, ಜಾನುವಾರುಗಳನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಗುರುವಾರ ಪಂಜದಲ್ಲಿ ನಡೆದಿತ್ತು.
ಬೆಳ್ಳಾರೆ ಕಡೆಯಿಂದ ಪಂಜದ ಕಡೆ ಬರುತ್ತಿದ್ದ ಪಿಕಪ್ ವಾಹನದಲ್ಲಿ ಎರಡು ದನ ಹಾಗೂ ಎರಡು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ಹಿಂದೂ ಪರ ಸಂಘಟನೆಯವರು ಪೊಲೀಸರಿಗೆ
ಮಾಹಿತಿ ರವಾನಿಸಿದ್ದರು.
ಪೊಲೀಸರು ವಾಹನ ಸಹಿತ ಚಾಲಕ, ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು ವಾಹನ ಚಾಲಕ ಸಕಲೇಶಪುರ ಮೂಲದ ಲೋಹಿತ್ ಎಂಬಾತನನ್ನು ವಶಕ್ಕೆ
ಪಡೆದಿದ್ದಾರೆ.
ಜಾನುವಾರುಗಳನ್ನು ಚೊಕ್ಕಾಡಿಯಿಂದ ಸಾಕುವ ಉದ್ದೇಶದಿಂದ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಆದರೆ ಅನುಮತಿ ಪಡೆಯದೆ ನಿಯಮ ಬಾಹಿರವಾಗಿ ಸಾಗಾಟ ನಡೆಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.