




ಕಡಬ: 35 ವರ್ಷಗಳ ಹಳೆಯ ಹಲ್ಲೆ ಪ್ರಕರಣವನ್ನು ಖಲಾಸೆಗೊಳಿಸಿ, ನ್ಯಾಯಾಲಯ ಪ್ರಕರಣದ ಆರೋಪಿಯನ್ನು ನಿರ್ದೋಷಿ ಎಂದು ಪುತ್ತೂರು ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್‌ಎಫ್ ಸಿ ನ್ಯಾಯಾಲಯ ಆದೇಶ ಮಾಡಿದೆ.
ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಗ್ರಾಮದ ಕಕ್ವೆ ನಿವಾಸಿ ಹರಿಪ್ರಸಾದ್ ಎಂಬವರು ವ್ಯಕ್ತಿಯೋರ್ವರಿಗೆ 1989ರಲ್ಲಿ ಹಲ್ಲೆ ನಡೆಸಿರುವುದಾಗಿ ಕಡಬ ಠಾಣೆಯಲ್ಲಿ
ಪ್ರಕರಣ ದಾಖಲಾಗಿತ್ತು.
ನಂತರದ ಬೆಳವಣಿಗೆಯಲ್ಲಿ ಆರೋಪಿ ಮೇಲಿನ ಪ್ರಕರಣ ಕಾರಣಾಂತರಗಳಿಂದ ಬಾಕಿಯಾಗಿತ್ತು. ಸೋಮವಾರಪೇಟೆಯಲ್ಲಿ ವಾಸವಾಗಿದ್ದ
ಅವರು ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದರು. ಠಾಣೆಗೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು.
ಹೀಗಾಗಿ ಎಲ್. ಪಿ. ಸಿ ವಾರಂಟ್ ಮುಖಾಂತರ ಕಡಬ ಪೊಲೀಸರು 29 ವರ್ಷ ಗಳ ನಂತರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಆರೋಪಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು,.
ನ್ಯಾಯಾಲಯ ಅರ್ಜಿಯನ್ನು ಪರಿಶೀಲಿಸಿ ವಾದ ಪ್ರತಿವಾದಗಳನ್ನು ಆಲಿಸಿ ಆರೋಪಿ ಹರಿಪ್ರಸಾದ್ ಅವರನ್ನು ಖುಲಾಸೆಗೊಳಿಸಿ ಪ್ರಕರಣ ಇತ್ಯರ್ಥಗೊಳಿಸಿದೆ. ಆರೋಪಿ ಪರವಾಗಿ ವಕೀಲರಾದ ಅವಿನಾಶ್ ಬೈತಡ್ಕ ಮತ್ತು ಗುರುಚರಣ್ ಕೊಪ್ಪಡ್ಕ ವಾದ ಮಂಡಿಸಿದ್ದಾರೆ