




ಕಳೆದ ಕೆಲ ದಿನಗಳಿಂದ ಕಾಫಿನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು ಪರಿಣಾಮ ಚಾರ್ಮಾಡಿ ಘಾಟಿಯ ಹೆದ್ದಾರಿ ಹಾಗೂ ತಡೆಗೋಡೆಗಳಲ್ಲಿ ಬಿರುಕು ಕಂಡುಬಂದಿದ್ದು ಕುಸಿಯುವ ಭೀತಿ ಎದುರಾಗಿದೆ ಎನ್ನಲಾಗಿದೆ.
ಈ ಹಿಂದೆ ಕುಸಿದಿದ್ದ ಜಾಗದಲ್ಲಿ ಕಾಮಗಾರಿ ನಡೆದಿದ್ದು ಅದೇ ಜಾಗ ಸೇರಿದಂತೆ ಸುಮಾರು ಮೂರೂ ನಾಲ್ಕು ಕಡೆಗಳಲ್ಲಿ ಬಿರುಕು ಕಂಡುಬಂದಿದ್ದು ಕುಸಿಯುವ ಭೀತಿ ಎದುರಾಗಿದೆ 100-200 ಅಡಿ ಮಣ್ಣು ತುಂಬಿಸಿ ರಸ್ತೆ ಸಿರ್ಮಿಸಿದ ಜಾಗದಲ್ಲೇ ಬಿರುಕು ಬಿಟ್ಟಿದೆ.
ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅದ್ವಾನ ಕಂಡು ಸ್ಥಳಿಯರು,
ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ ಅಲ್ಲದೆ ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ಬಿಟ್ಟಿರುವುದು
ಕಾಣದಂತಾಗಿದೆ.
ಕೋಟ್ಯಂತರ
ರೂಪಾಯಿ ವ್ಯಯಿಸಿ ಹೆದ್ದಾರಿ ಕಾಮಗಾರಿ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.