




ಕೊಕ್ಕಡ: ಇಲ್ಲಿನ ಮಲ್ಲಿಗೆ ಮಜಲು ಎಂಬಲ್ಲಿ ಮೋರಿ ಬಳಿ ಕರುವಿನ ಶವ ಪತ್ತೆಯಾಗಿದ್ದು ಅಪರಿಚಿತರು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಕೊಕ್ಕಡ
ಗ್ರಾ.ಪಂ ಅಭಿವೃದ್ದಿ ಅಧಿಕಾರಿಯವರ ಮಾಹಿತಿ ಮೇರೆಗೆ ಹಿಂದೂ ಜಾಗರಣಾ
ವೇದಿಕೆ -ಛತ್ರಪತಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡದ ಯುವಕರು ಮೋರಿಯಿಂದ ಕರುವನ್ನು ತೆಗೆದು ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಕರು ಸತ್ತು ಕೆಲ ದಿನಗಳಾಗಿರ ಬಹುದು ಎಂದು ಅಂದಾಜಿಸಲಾಗಿದ್ದು ಉದ್ದೇಶ ಪೂರ್ವಕವಾಗಿಯೇ ಕರುವನ್ನು ಕೊಂದಿರಬಹುದೆಂಬ ಸುದ್ದಿ ಸಾರ್ವಜನಿಕರ ವಲಯದಲ್ಲಿ ಹಬ್ಬಿದೆ.
ಮೋರಿಯ ಸಮೀಪ ಗಾಡಿಯೊಂದು ನಿಂತ ಕುರುಹುಗಳು ಕಂಡುಬಂದಿದೆ. ಈ ಭಾಗದಲ್ಲಿ ದನಗಳ ಕಳವು ಆಗಾಗ ನಡೆಯುತ್ತಿದ್ದು, ಕರು ಸತ್ತು ಬಿದ್ದಿದ್ದ ಪ್ರದೇಶಕ್ಕೆ ಸಮೀಪದಲ್ಲೇ ಅಕ್ರಮ ಕಸಾಯಿಖಾನೆಯೊಂದಿದ್ದು, ಅಲ್ಲಿಗೆ ತಂದಿರುವ ಕರು ಸತ್ತಿರುವ ಕಾರಣ ಮೋರಿಯಲ್ಲಿ ಬಿಸಾಡಿರಬಹುದೇ ಎಂದು ಚರ್ಚೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ