




ಕುಕ್ಕೆಸುಬ್ರಹ್ಮಣ್ಯ: ಕುಮಾರಪರ್ವತ ಶ್ರೇಣಿಯ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.ನೀರಿನ ಮಟ್ಟ ಏರಿಕೆಯಾದ ಕಾರಣ ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟವೂ ಮುಳುಗಡೆ ಸ್ಥಿತಿಯಲ್ಲೇ ಇದೆ.ಇದೀಗ ನೆರೆ ನೀರಿನಲ್ಲಿ ಆನೆ ಮೃತದೇಹ ತೇಲಿಬಂದ ಘಟನೆ ಸೋಮವಾರ ತಡರಾತ್ರಿ ಗೊತ್ತಾಗಿದೆ.
ತುಂಬಿ
ಹರಿಯುತ್ತಿರುವ ನೀರಿನ ಮಟ್ಟವನ್ನು ವೀಕ್ಷಣೆಗೆ ಸೋಮವಾರ ತಡ ರಾತ್ರಿ ಮನ್ಮಥ
ಬಟ್ಟೋಡಿ ಮತ್ತಿತರರು ತೆರಳಿದ್ದ ವೇಳೆ ನೆರೆ ನೀರಿನಲ್ಲಿ ಮೃತದೇಹವೊಂದು ತೇಲಿಬರುತ್ತಿರುವುದು
ಕಂಡುಬಂದಿದೆ.
ಸೂಕ್ಷ್ಮವಾಗಿ
ಗಮನಿಸಿದಾಗ ಆನೆ ಮೃತದೇಹ ಎಂಬುದು ಗೊತ್ತಾಗಿದೆ. ಆನೆ ನದಿ ದಾಟುವ ಸಂದರ್ಭ ಅಥವಾ ಕೆಲ
ದಿನಗಳ ಹಿಂದೆಯೇ ಎಲ್ಲೋ ಸತ್ತು ಈ ಭಾಗಕ್ಕೆ ತೇಲಿ
ಬಂದಿರುವ ಶಂಕೆ ವ್ಯಕ್ತವಾಗಿದೆ.
ಆನೆ
ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗಿದ್ದು ಅರಣ್ಯ ಇಲಾಖೆ ಹುಟುಕಾಟದಲ್ಲಿದೆ
ಎಂಬ ಮಾಹಿತಿ ಲಭ್ಯವಾಗಿದೆ. ನಿರಂತರ ಮಳೆಯಿಂದ ಜನರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ.