




ಕಡಬ ಟೈಮ್: ಗ್ರಾಮ ಪಂಚಾಯತ್ ಆಗಿದ್ದ ಕಡಬ ಈಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದೆ. ಸಿಬ್ಬಂದಿಗಳ ಕೊರತೆ ನಡುವೆಯೂ ಹಲವು ಸವಾಲುಗಳ ನಡುವೆ ಇಲ್ಲಿನ ಸಿಬ್ಬಂದಿಗಳು ಕೆಲಸನಿರ್ವಹಿಸುತ್ತಿದ್ದಾರೆ. ಈ ನಡುವೆ ಹಸಿಮೀನು ಮಾರುಕಟ್ಟೆಯ ಏಲಂ ವಿಚಾರದಲ್ಲಿ ಪಟ್ಟಣ ಪಂಚಾಯತ್ ಎಡವಟ್ಟು ಮಾಡಿಕೊಂಡು ಅನಿವಾರ್ಯವಾಗಿ ಈಗ ಬಹಿರಂಗ ಏಲಂ ಕರೆಯಲು ಮುಂದಾಗಿದೆ.
ನಿಯಾಮಾನುಸಾರ ಬಹಿರಂಗವಾಗಿ ಏಲಂ ಕರೆಯಬೇಕಿದ್ದರೂ ಹೊಂದಣಿಕೆ ಮಾಡಿ ಈ ಹಿಂದೆ ಏಲಂ ಪಡೆದುಕೊಂಡು ಇರುವವರನ್ನೇ ಮುಂದುವರಿಸಲು ಕಸರತ್ತು ನಡೆದಿತ್ತು. ಚುನಾವಣಾ ನಿಮಿತ್ತ ಪ.ಪಂ ಅಧಿಕಾರ ವಹಿಸಿಕೊಂಡಿದ್ದ ಮುಖ್ಯಾಧಿಕಾರಿಯವರ ಅವಧಿಯಲ್ಲಿ ಸದ್ದಿಲ್ಲದೆ ಗುಪ್ತವಾಗಿ ಏಲಂ ಮಾತುಕತೆ ನಡೆದಿತ್ತು ಎಂದು ತಿಳಿದು ಬಂದಿದೆ .ಈ ಘಟನೆ ನಡೆದು ಸುಮಾರು ಒಂದುವರೆ ತಿಂಗಳು ಕಳೆದಿದೆ. ಈ ಬೆಳವಣಿಗೆಗೆ ಜಿಲ್ಲಾಧಿಕಾರಿ ಬ್ರೇಕ್ ಹಾಕಿದ್ದಾರೆ.
ಗ್ರಾ.ಪಂ ಗಳಿಗೆ ಆಯಾ ವ್ಯಾಪ್ತಿಯಲ್ಲಿ ಯಾರು ಹಸಿಮೀನು ಮಾರಾಟದಲ್ಲಿ ಏಲಂ ಪಡೆದಿರುತ್ತಾರೋ ಅವರು ಜೀವನ ನಿರ್ವಹಣೆಗಾಗಿ ಮತ್ತೆ ಮುಂದುವರಿಸಲು ಕ್ರಮ ಜರುಗಿಸುವ ಅಧಿಕಾರ ಗ್ರಾ.ಪಂ ಅಧಿಕಾರಿಗಳಿಗೆ ಇದೆ. ಆದರೆ ಗ್ರಾ.ಪಂ ನಿಯಮ ಪಟ್ಟಣ ಪಂಚಾಯತ್ ಗೆ ಅನ್ವಯಿಸದು.
ಕಡಬ ಪಟ್ಟಣ ಪಂಚಾಯತ್ ನಲ್ಲಿ ಹಸಿ ಮೀನು ಮಾರುಕಟ್ಟೆ ವಿಚಾರವಾಗಿ ಮೂವರು ಏಲಂ ನಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಈ ಹಿಂದೆ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ಅದರ ಹತ್ತು ಶೇಕಡಾ ದರ ಹೆಚ್ಚಿಸಿ ನೀಡುವ ನಿರ್ಧಾರಕ್ಕೆ ಬಂದಿದ್ದರು. ಪಟ್ಟಣ ಪಂಚಯತ್ ನಲ್ಲಿ ನಿರ್ಣಯವೂ ಆಗಿತ್ತು ಎಂಬ ಮಾಹಿತಿ ಲಭ್ಯವಾದರೂ ಅಧಿಕಾರಿಗಳಿಂದ ಖಚಿತತೆ ಸಿಕ್ಕಿಲ್ಲ . ಗೌಪ್ಯವಾಗಿ ನಿಯಮ ಬಾಹಿರವಾಗಿಯೇ ನಡೆದಿದ್ದ ಈ ಮಾತುಕತೆಗಳು ಕೆಲ ದಿನಗಳ ಬಳಿಕ ಜಿಲ್ಲಾಧಿಕಾರಿಗಳವರೆಗೆ ದೂರು ಹೋಗಿತ್ತು.
ದೂರುದಾರರು ಜಿಲ್ಲಾಧಿಕಾರಿಗಳ ಕದ ತಟ್ಟಿದ ಕಾರಣ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕಡಬ ಪಟ್ಟಣ ಪಂಚಾಯತ್ 2024-25ನೇ ಸಾಲಿನ ಹಸಿಮೀನು ಮಾರುಕಟ್ಟೆ ಮತ್ತು ಸಂತೆ ವರಿವಸೂಲಿಗೆ ಬಹಿರಂಗವಾಗಿ ಏಲಂ ಕರೆದಿದೆ. ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿ ಏಲಂ ಪ್ರಕಟಣೆಯನ್ನೂ ನೀಡಿದೆ. ಅದರ ವಿವರ ಇಲ್ಲಿದೆ ನೋಡಿ