ಸುಳ್ಯ: ಅಮಾವಾಸ್ಯೆ ದಿನ ಬಂದ್ರೆ ಸ್ಮಶಾನದಲ್ಲಿ ತಲೆ ಇಲ್ಲದ ಪ್ರೇತ ತೋರಿಸ್ತೆನೆ ಎಂದಿದ್ದ ರುದ್ರಭೂಮಿ ಕಾವಲುಗಾರನ ಸವಾಲು ಸ್ವೀಕರಿಸಿದ ಹುಲಿಕಲ್ ನಟರಾಜ್

ಸುಳ್ಯ: ಅಮಾವಾಸ್ಯೆ ದಿನ ಬಂದ್ರೆ ಸ್ಮಶಾನದಲ್ಲಿ ತಲೆ ಇಲ್ಲದ ಪ್ರೇತ ತೋರಿಸ್ತೆನೆ ಎಂದಿದ್ದ ರುದ್ರಭೂಮಿ ಕಾವಲುಗಾರನ ಸವಾಲು ಸ್ವೀಕರಿಸಿದ ಹುಲಿಕಲ್ ನಟರಾಜ್

Kadaba Times News

ಕಡಬ ಟೈಮ್ಸ್:   ಸುಳ್ಯದ ಕೊಡಿಯಾಲಬೈಲು ರುದ್ರಭೂಮಿಯ ಕಾವಲುಗಾರ ಗುರುವ ಅವರನ್ನು ಅಲ್ಲಿನ ಡಿಜಿಟಲ್ ಮಾದ್ಯಮ ನ್ಯೂಸ್ ನಾಟೌಟ್ ನಲ್ಲಿ   ಸಂದರ್ಶನ ಮಾಡಿತ್ತು.  ಸ್ಮಶಾನದಲ್ಲಿ ಅವರಿಗಾಗುತ್ತಿದ್ದ ಅನುಭವ ,ರಾತ್ರಿ ವೇಳೆಯ ವಾತಾವರಣ ಹೀಗೆ ಎಲ್ಲವನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದ್ದು     ಪವಾಡ ರಹಸ್ಯ ಬಯಲು ಮಾಡುವುದರಲ್ಲಿ ಖ್ಯಾತಿ ಪಡೆದಿದ್ದ ಹುಲಿಕಲ್ ನಟರಾಜ್ ಅವರಿಗೂ ಈ ವಿಚಾರ ಮುಟ್ಟಿಸಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ  ನಟರಾಜ್ ಸುಳ್ಯಕ್ಕೆ ಬಂದು ಸ್ಮಶಾನದಲ್ಲಿ ಒಂದು ರಾತ್ರಿ ಕಳೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

 


ಕಾವಲುಗಾರ ಗುರುವ ಅವರು, “ ಸ್ಮಶಾನದಲ್ಲಿ ರಾತ್ರಿ ಉಳಿದುಕೊಳ್ಳುವ ಸಂದರ್ಭದಲ್ಲಿ ನಾನು ಅನೇಕ ಪ್ರೇತಗಳನ್ನು ಕಣ್ಣಾರೆ ಕಂಡಿದ್ದೇನೆ.  ಪ್ರೇತ ಎಂದರೆ ಅದೊಂದು ಮೂಢನಂಬಿಕೆ, ಪ್ರೇತ ಅನ್ನುವಂತದ್ದು ಇಲ್ಲವೇ ಇಲ್ಲವೆಂದು ಯಾರಾದರೂ ವಾದಿಸುವುದಿದ್ದರೆ ನಾನು ಅವರಿಗೆ ಸ್ಮಶಾನದಲ್ಲಿ ಪ್ರೇತಗಳು ಅಡ್ಡಾಡುವುದನ್ನು ತೋರಿಸಲು ಸಿದ್ದಅದರಲ್ಲೂ ಅಮಾವಾಸೆ ದಿನ ಬಂದರೆ ತಲೆ ಇಲ್ಲದ ಪ್ರೇತ ತೋರಿಸ್ತೆನೆ  ಎಂದು ಸವಾಲೆಸೆದಿದ್ದರು.


ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಹುಲಿಕಲ್ ನಟರಾಜ್ ಅವರಿಗೂ ವೀಡಿಯೋ ತುಣುಕು ಸಿಕ್ಕಿ ಗುರುವ ಅವರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ ನಟರಾಜ್ ಅವರು ಖುದ್ದಾಗಿ ಗುರುವ ಅವರಿಗೆ ಕರೆಮಾಡಿ, “ನಾನು ಸವಾಲನ್ನು ಸ್ವೀಕರಿಸಲು ಸಿದ್ದ, ಸ್ಮಶಾನಕ್ಕೆ ಯಾವಾಗ ಬರಬೇಕು, ತಿಳಿಸಿಎಂದಿದ್ದರು.


ಅದಕ್ಕೆ ಉತ್ತರಿಸಿದ ಗುರುವರವರು, “ಯಾವುದಾದರೂ ಒಂದು ಮಂಗಳವಾರದ ಅಮವಾಸ್ಯೆಯ ರಾತ್ರಿ ಬಂದಲ್ಲಿ ಪ್ರೇತಗಳನ್ನು ನೋಡಬಹುದು, ನೀವು ಸ್ಥಳೀಯ ಪಂಚಾಯತ್ ಅನುಮತಿ ಪಡೆದುಕೊಂಡು ಬರಬೇಕಾಗುತ್ತದೆ. ಸ್ಮಶಾನದಲ್ಲಿ ನಿಮಗೇನಾದರೂ ತೊಂದರೆ ಸಂಭವಿಸಿದಲ್ಲಿ ನೀವೇ ಅದಕ್ಕೆ ಹೊಣೆಗಾರರಾಗುತ್ತೀರಿಎನ್ನುತ್ತಾರೆ.


ತದ ನಂತರ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸುಂತೋಡುರವರನ್ನು ಸಂಪರ್ಕಿಸಿದಾಗಲೂಪರ್ಮಿಷನ್ ಕೊಡಲಿಕ್ಕೆ ಆಗುವುದಿಲ್ಲ, ಆಮೇಲೆ ಫೋನ್ ಮಾಡುತ್ತೇನೆಎಂದಿದ್ದರು. ಇದೀಗ ಗುರುವ ಅವರ ಸವಾಲನ್ನು ಸ್ವೀಕರಿಸಿರುವ ನಟರಾಜ್ ಅವರು,ಉಬರಡ್ಕ ಪಂಚಾಯತಿಗೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಅನುಮತಿಗಾಗಿ ಪತ್ರ ಬರೆಯಲು ನಿರ್ಧರಿಸಿದ್ದಾರೆ

ನ್ಯೂಸ್ ನಾಟೌಟ್ ಬಿತ್ತರಿಸಿದ ವೀಡಿಯೋ ಸಂದರ್ಶನ ಇಲ್ಲಿದೆ





#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top