Puttur Town Police Station: ಬ್ರೈನ್ ಸ್ಟ್ರೋಕ್ ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಎಸ್ ಐ ಸುಂದರ ಕಾನಾವು ನಿಧನ

Puttur Town Police Station: ಬ್ರೈನ್ ಸ್ಟ್ರೋಕ್ ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಎಸ್ ಐ ಸುಂದರ ಕಾನಾವು ನಿಧನ

Kadaba Times News

ಪುತ್ತೂರು  : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ.


ಮೂರು ದಿನಗಳಿಂದ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರು ಪಡೀಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ .ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ

ಸದ್ಯ ಮೃತರ ಪಾರ್ಥಿವ ಶರೀರ ಮಂಗಳೂರಿನಲ್ಲಿ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಸೇವೆಗೆ ಸೇರಿದ ಇವರು ಬಳಿಕ ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಂಡು ಅಲ್ಲಿಂದ ಬಂಟ್ವಾಳ ಠಾಣೆಗೆ ವರ್ಗಾವಣೆಗೊಂಡರು. ಅಲ್ಲಿಂದ ಸಂಪ್ಯ ಠಾಣೆಗೆ ವರ್ಗಾವಣೆಗೊಂಡು ಅಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಭಡ್ತಿಗೊಂಡು ಇತ್ತೀಚೆಗೆ ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು .  ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top