ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯಿಂದ ನೋಡಲೆತ್ನಿಸಿದ ವ್ಯಕ್ತಿ ಪೊಲೀಸ್ ವಶ

ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಕಿಟಕಿಯಿಂದ ನೋಡಲೆತ್ನಿಸಿದ ವ್ಯಕ್ತಿ ಪೊಲೀಸ್ ವಶ

Kadaba Times News

ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ಯುವತಿಯೋರ್ವರು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಲೆತ್ನಿಸಿದ ವ್ಯಕ್ತಿಯನ್ನು  ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಆದಿತ್ಯವಾರ ರಾತ್ರಿ ನಡೆದಿದೆ.


ಆರೋಪಿತ ವ್ಯಕ್ತಿ  ವಿವಾಹಿತನಾಗಿದ್ದು, 16 ಹಾಗೂ 9 ವರ್ಷದ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ.




ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯ ಬಾಗಿಲನ್ನು ಸರಿಸಲು ಯತ್ನಿಸಿದ್ದ ವೇಳೆ ಉಂಟಾದ ಶಬ್ದದಿಂದ ಸಂಶಯಗೊಂಡ ಯುವತಿ ತನ್ನ ತಾಯಿಗೆ ಮಾಹಿತಿ ನೀಡಿದರು. ತಾಯಿ ಪರಿಶೀಲಿಸಿದಾಗ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು  ರಹಿಮಾನ್ ಎಂದು ಗುರುತಿಸಿದ್ದರು.  ಈ ವೇಳೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಾಗ ಜಮಾಯಿಸಿದ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.


ತಾನು ಕಿಟಕಿಯಿಂದ ವೀಕ್ಷಿಸಲು ಯತ್ನಿಸಿ ಪರಾರಿಯಾಗುತ್ತಿದ್ದ ಕೃತ್ಯವನ್ನು ಯಾರೂ ನೋಡಿಲ್ಲ ಎಂದು ಭಾವಿಸಿ , ಯುವತಿಯ ತಾಯಿ ಬೊಬ್ಬೆ ಹೊಡೆದಾಗ, ತಾನೇ ಮನೆಗೆ ಮೊದಲಾಗಿ ಧಾವಿಸಿ ಸಂಕಷ್ಠಕ್ಕೆ ಧಾವಿಸಿ ಬಂದವನಂತೆ ವರ್ತಿಸಿದ್ದ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.


ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸ್ಥಳೀಯ ಬಿಜೆಪಿ ಮುಖಂಡರಾದ ಸುರೇಶ್ ಅತ್ರೆಮಜಲು,ಆನಂದ ಕುಂಟಿನಿ, ಸಂತೋಷ್ ಕುಮಾರ್ ಪರಂದಾಜೆ, ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಸೇರಿದಂತೆ ಹಲವರು ಪೊಲೀಸ್ ಠಾಣೆಗೆ ಭೇಟಿ ನೀಡಿ,ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು, ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top