ಕಡಬ: ದಿಢೀರ್ ಆತ್ಮಹತ್ಯೆ ಮಾಡಿಕೊಂಡ ಈ ಯುವಕನ ಸಾವಿಗೆ ಇದೇ ಕಾರಣ

ಕಡಬ: ದಿಢೀರ್ ಆತ್ಮಹತ್ಯೆ ಮಾಡಿಕೊಂಡ ಈ ಯುವಕನ ಸಾವಿಗೆ ಇದೇ ಕಾರಣ

Kadaba Times News
ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ತಿಮರಡ್ಡ ಎಂಬಲ್ಲಿ ಅಜರುದ್ದೀನ್‌ ಎಂಬ ಯುವಕ ಜುಲೈ 20 ರ ರಾತ್ರಿ ಮನೆಯಲ್ಲಿ ದಿಡೀರ್ ಆತ್ಮಹತ್ಯೆಗೆ ಶರಣಾಗಿದ್ದರು.ಈತನ ಸಾವಿಗೆ ಕಾರಣ ಈಗ ಬಹಿರಂಗವಾಗಿದೆ.

ಮೃತ ಯುವಕನ ತಂಗಿ ಸಫೀನ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದಾರೆ.
 
ದೂರಿನ ಸಾರಾಂಶ:  ತನ್ನ ತಾಯಿ ಮತ್ತು ತನ್ನ ಅಣ್ಣನಾದ ಅಜರುದ್ದೀನ್‌ ಎಂಬವರ ಸಂಸಾರದೊಂದಿಗೆ ವಾಸವಿದ್ದು ಜುಲೈ 20 ರಂದು ರಾತ್ರಿ 8.30 ಗಂಟೆಗೆ ಮನೆಯಲ್ಲಿರುವಾಗ ತನ್ನ ಅಣ್ಣ ಅಜರುದ್ದೀನ್  ಹಾಗೂ ಅತ್ತಿಗೆ  3 ದಿನಗಳಿಂದ ಮನೆಯಲ್ಲಿ ಬೇರೆ ಮನೆ ಮಾಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದರು. 

ನಂತರ  ಅಣ್ಣ ಅಜರುದ್ದೀನ್ ರಾತ್ರಿ ತನ್ನ ಮಗುವಿನೊಂದಿಗೆ ಕಡಬ ಪೇಟೆಗೆ ಹೋಗಿ ಬಳಿಕ ಮನೆಗೆ ಬಂದು ಪತ್ನಿಯನ್ನು ಕರೆದಾಗ ಮನೆಯಲ್ಲಿ ಇರಲಿಲ್ಲ ,ಬಳಿಕ ಮನೆ ಹೊರಗಿನಿಂದ ಬಂದಿರುತ್ತಾಳೆ. ನಂತರ ಅಜರುದ್ದೀನ್ ತನ್ನ ಪತ್ನಿಯಲ್ಲಿ  ಎಲ್ಲಿ ಹೋಗಿದ್ದೆ ಎಂದು ಕೇಳಿದಾಗ ಆಕೆ  ಪಕ್ಕದ ಮನೆಗೆ ಹೋಗಿರುವುದಾಗಿ ಹೇಳಿರುತ್ತಾಳೆ ಬಳಿಕ ತನ್ನ  ಅಣ್ಣ ಬೇಸರಗೊಂಡು ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂದು ಹೇಳಿ ರೂಮಿನೊಳಗೆ ಹೋಗಿರುತ್ತಾನೆ. 

ಸ್ವಲ್ಪ ಸಮಯದ ಬಳಿಕ ಅತ್ತಿಗೆ ರೂಮಿಗೆ ಹೋದಾಗ  ಅಣ್ಣ ಅಜರುದ್ದೀನ್ ನೇಣು ಬಿಗಿದುಕೊಂಡು ನೇತಾಡುವುದನ್ನು ಕಂಡು ಕೂಗಿಕೊಂಡಿದ್ದು ನಂತರ ಮನೆಯಲ್ಲಿದ್ದ ಅಮ್ಮ ರೂಮಿನೊಳಗೆ ಹೋಗಿ ನೋಡಿದಾಗ  ಕಾಟನ್‌ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಬಳಿಕ ಬಟ್ಟೆಯನ್ನು ಕತ್ತರಿಸಿ ಕೆಳಕ್ಕಿಳಿಸಿ ತಕ್ಷಣ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
 ಮೃತ ಅಜರುದ್ದೀನ್  ತನ್ನ ಸಂಸಾರದ  ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಮರಣದಲ್ಲಿ ಬೇರೆ ಸಂಶಯವಿರುವುದಿಲ್ಲ. ಆದುದರಿಂದ ಮೃತದೇಹದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮೃತದೇಹವನ್ನು ಅಂತ್ಯಕ್ರಿಯೇ ಮಾಡುವರೇ ಬಿಟ್ಟುಕೊಡಬೇಕಾಗಿ ಕೋರಿಕೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top