ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಬಿಜೆಪಿ ಶಾಸಕ ಭರತ್ ಶೆಟ್ಟಿ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಬಿಜೆಪಿ ಶಾಸಕ ಭರತ್ ಶೆಟ್ಟಿ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ದೂರು

Kadaba Times News

 ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆ ಮಂಗಳೂರು ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ವಿರುದ್ಧ ಎಂಎಲ್​ಸಿ ಐವನ್ ಡಿಸೋಜಾ ನೇತೃತ್ವದ ನಿಯೋಗ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್​ಗೆ ದೂರು ನೀಡಿದ್ದು ಎಫ್ಐಆರ್‌ ದಾಖಲಿಸಿ ಭರತ್ ಶೆಟ್ಟಿಯನ್ನು ಬಂಧಿಸಲು ಒತ್ತಾಯಿಸಿದೆ.



ಮಂಗಳೂರಿನ ಕಾವೂರಿನಲ್ಲಿ ನಿನ್ನೆ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಶಾಸಕ ಭರತ್ ಶೆಟ್ಟಿ, ‘ಕಾಂಗ್ರೆಸ್ನಾಯಕ ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ರಾಹುಲ್ ಗಾಂಧಿ ಶಿವನ ಫೋಟೋ ಹಿಡಿದು ನಿಂತಿದ್ದ. ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಎಂಬ ಹೇಳಿಕೆಯೊಂದಿಗೆ ಪ್ರಚೋದನಾಕಾರಿ, ವಿವಾದಾತ್ಮಕ ಹೇಳಿಕೆ ನೀಡಿದ್ದರು.


ಹಿನ್ನಲೆ ಐವನ್ ಡಿಸೋಜಾ ನೇತೃತ್ವದ ನಿಯೋಗ ಭರತ್ ಶೆಟ್ಟಿ ಅವರನ್ನು ಬಂಧಿಸಿ ಕ್ರಮ ಜರುಗಿಸುವಂತೆ ಕಮಿಷನರ್ಗೆ ದೂರು ನೀಡಿದೆ.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top