




ಕಡಬ/ಬಿಳಿನೆಲೆ: ಇತ್ತೀಚೆಗೆ ಕೊಂಬಾರು ಗ್ರಾಮದಲ್ಲಿ ಮೀಸಲು ಅರಣ್ಯದಲ್ಲಿ ಗುಡಿಸಲು ನಿರ್ಮಿಸಿ ವಾಸವಿದ್ದ ಬಡ ಎರಡು ಕುಟುಂಬಗಳ ಟೆಂಟ್ ಮನೆಗಳನ್ನು ಅರಣ್ಯ ಇಲಾಖೆ ಜೂನ್.29ರಂದು ತೆರವುಗೊಳಿಸಿತ್ತು.
ನಂತರದ ಬೆಳವಣಿಗೆಯಲ್ಲಿ ಅರಣ್ಯಾಧಿಕಾರಿಗಳು
ಮತ್ತೆ ಬಿಳಿನೆಲೆ ಗ್ರಾಮದಲ್ಲಿ ಸರ್ಕಾರಿ ಜಾಗವೊಂದನ್ನು ಸೂಚಿಸಿ ಕುಟುಂಬಗಳು ವಾಸ ಮಾಡುವಂತೆ ತಿಳಿಸಿದ್ದರು . ಹೀಗಾಗಿ ಬಡ
ಕುಟುಂಬಗಳು ಜುಲೈ 1ರಂದು ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ
ಮನೆ ನಿರ್ಮಾಣಕ್ಕೆ ಸಿದ್ದತೆ ಮಾಡಿದ್ದರು.
ಆದರೆ ಸ್ಥಳೀಯರೊಬ್ಬರ ದೂರಿನ ಮೇರೆಗೆ ಮನೆ ಕಟ್ಟಲು ಸಿದ್ದತೆ ನಡೆಸಿದ್ದ ಎರಡು ಕುಟುಂಬಗಳನ್ನು ಅರಣ್ಯ ಸಂಬಂಧಿ ಜಾಗವೆಂದು ಮತ್ತೆ ಅಲ್ಲಿಂದ ಅರಣ್ಯಧಿಕಾರಿಗಳು ಎಬ್ಬಿಸಿದ್ದಾರೆ. ಬಡಕುಟುಂಬಗಳನ್ನು ಮತ್ತೆ ಅಲ್ಲಿ ವಾಸವಿರದಂತೆ ಸೂಚಿಸಿದ ವಿಚಾರ ತಿಳಿದು ದಲಿತಪರ ಸಂಘಟನೆಯೊಂದು ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ. ಸ್ಥಳೀಯರೊಬ್ಬರು ಸರ್ಕಾರಿ ಜಾಗ ಎನ್ನಲಾದ ಸ್ಥಳದಲ್ಲಿ ಕೃಷಿ ಚಟುವಟಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಕಾಲೇಜು ವಿದ್ಯಾರ್ಥಿಯ ವಿರುದ್ದ ದೂರು: ಘಟನಾ
ಸ್ಥಳದಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕನನ್ನು ಸಂಘಟನೆಯವರು ಪ್ರಶ್ನಿಸಿದ್ದು ಈ ವೇಳೆ
ಮಾಧ್ಯಮ ವರದಿಗಾರನೆಂದು ಹೇಳಿದ್ದರು ಎಂದು ತಿಳಿದು
ಬಂದಿದೆ. ಬಡ ಕುಟುಂಬ ಮನೆ ಕಟ್ಟಲು ಸಿದ್ದತೆ ಮಾಡಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಈ ವಿಚಾರ
ಠಾಣೆ ಮೆಟ್ಟಿಲೇರಿದೆ. ಸಂಘಟನೆ ಮುಖಂಡರೊಬ್ಬರು ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿರುವುದಾಗಿ ದೂರು
ನೀಡಿದ್ದರು. ಪೊಲೀಸರ ವಿಚಾರಣೆ ವೇಳೆ ಆತ ಕಾಲೇಜೊಂದರಲ್ಲಿ ಓದುತ್ತಿರುವುದಾಗಿ ತಿಳಿದು ಬಂದಿದ್ದು
ಕೆಲವು ಸುದ್ದಿಗಳನ್ನು ಸಂಗ್ರಹಿಸುತ್ತಿರುವುದು ತಿಳಿದು
ಬಂದಿದೆ. ಯುವಕ ಕ್ಷಮೆಯಾಚಿದ ಹಿನ್ನೆಲೆ ಹಾಗೂ ವಿದ್ಯಾರ್ಥಿಯ ಭವಿಷ್ಯದ ಹಿತ ದೃಷ್ಟಿಯಿಂದ ದೂರುದಾರರು ಕೇಸನ್ನು
ಹಿಂಪಡೆದಿದ್ದಾರೆ.
ಸುಳ್ಳು ಕೇಸು ದಾಖಲಿಸಲು ಮಹಿಳೆಯ ಹೈಡ್ರಾಮ: ಯುವಕನ ವಿರುದ್ದ ದೂರು ದಾಖಲಾಗಿರುವ ಸುದ್ದಿ ತಿಳಿದು ಯುವಕನ ತಾಯಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಹೊಸ ತಿರುವು ಪಡೆದುಕೊಂಡಿತ್ತು. ಮಗನ ವಿರುದ್ದ ದಾಖಲಾದ ದೂರು ಮಾತುಕತೆಯಲ್ಲಿ ಬಗೆಹರಿದಿದ್ದರೂ ತಾಯಿ ತನಗೆ ಹಲ್ಲೆಯಾಗಿದೆ ಎಂದು ಬಿಂಬಿಸಲು ಯತ್ನಿಸಿ ಎರಡು ದಿನದ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರ ರಾತ್ರಿ ಠಾಣೆಗೆ ಬಂದು ಮುಖಂಡರೊಬ್ಬರ ವಿರುದ್ದ ದೂರು ದಾಖಲಿಸುವುದಾಗಿ ಪಟ್ಟು ಹಿಡಿದ್ದರು. ಈ ನಡುವೆ ಪೊಲೀಸರು ಘಟನೆಗೆ ಸಂಬಂಧಿಸಿದವರು ಮಾತ್ರ ಬರುವಂತೆ ಸೂಚಿಸಿದ್ದರು.
ಇ ದರಿಂದ ಬೆಂಬಲಕ್ಕೆ ಬಂದ ಈ ಘಟನೆಗೆ ಸಂಬಂಧ ಪಡದ ವ್ಯಕ್ತಿಗಳು ದಿಕ್ಕು ತೋಚದೆ ಹೊರ ನಡೆದಿದ್ದರು. ಮಹಿಳೆ ತನ್ನ ಪರ್ಸ್ ಎಳೆದು ಹಲ್ಲೆ ಮಾಡಿರುವುದಾಗಿ ದೂರು ನೀಡಲು ಮುಂದಾಗಿದ್ದರು. ಮಗನನ್ನು ಠಾಣೆಗೆ ಕರೆದಾಗ ಜೊತೆಯಾಗಿ ಬಂದಿದ್ದ ತಾಯಿ ದಿನವಿಡಿ ಠಾಣೆಯಲ್ಲಿದ್ದರು, ಅರಣ್ಯಾಧಿಕಾರಿಗಳು ,ಗ್ರಾ.ಪಂ ಅಧಿಕಾರಿಗಳು ಸ್ಥಳದಲ್ಲಿದ್ದು ಯಾವುದೇ ಹಲ್ಲೆ ನಡೆದಿಲ್ಲ ಎಂಬುದನ್ನು ತಿಳಿಸಿದರೂ ಕೇಳಿರಲಿಲ್ಲ.ಘಟನೆಯ ಪೂರ್ಣ ವೀಡಿಯೋ ಇದ್ದರೂ ಸುಳ್ಳು ಕೇಸಿಗೆ ಪಟ್ಟು ಹಿಡಿದಾಗ ಕೊನೆಗೂ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದರು.
ಈ ನಡುವೆ ಸುಳ್ಳು
ಕೇಸು ದಾಖಲಿಸಿದರೆ ಆಗುವ ಪರಿಣಾಮದ ಬಗ್ಗೆ ತಿಳುವಳಿಕೆ ನೀಡಿದ್ದರು. ಕೊನೆಗೆ ತನ್ನ ವಿರುದ್ದವೇ ಕೇಸು ದಾಖಲಾಗುವ ಆತಂಕದಲ್ಲಿ ಬರೆದ ದೂರಿನ ಜೊತೆ ಮಹಿಳೆ ಠಾಣೆಯಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.