ಬೆಳ್ಳಾರೆ ಠಾಣೆ ವ್ಯಾಪ್ತಿ:ಸರ್ಕಾರಿ ಶಾಲೆಗೆ ನುಗ್ಗಿದ ಕಳ್ಳರು ಪಿಕ್ಕಾಸು ಬಿಟ್ಟು ಹೋದರು!

ಬೆಳ್ಳಾರೆ ಠಾಣೆ ವ್ಯಾಪ್ತಿ:ಸರ್ಕಾರಿ ಶಾಲೆಗೆ ನುಗ್ಗಿದ ಕಳ್ಳರು ಪಿಕ್ಕಾಸು ಬಿಟ್ಟು ಹೋದರು!

Kadaba Times News

ಸುಳ್ಯ: ಇತ್ತೀಚೆಗೆ ಸರ್ಕಾರಿ ಶಾಲೆಗಳನ್ನು ಕೇಂದ್ರೀಕರಿಸಿ ಕಳ್ಳತನ ನಡೆಸುತ್ತಿರುವುದು ಅಲ್ಲಲ್ಲಿ ಸುದ್ದಿಯಾಗುತ್ತಿದೆ. ಇದೀಗ  ಬೆಳ್ಳಾರೆ ಠಾಣಾ ವ್ಯಾಪ್ತಿಯ  ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜು. 26ರಂದು ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ.


ಶಾಲೆಯ ಶಿಕ್ಷಕರ ಕಚೇರಿ ರೂಂನ ಬಾಗಿಲನ್ನು ಪಿಕ್ಕಾಸಿನಿಂದ ಹೊಡೆದು   ಒಳನುಗ್ಗಿದ ಕಳ್ಳರು ಕಚೇರಿಯೊಳಗಿರುವ ಕಪಾಟನ್ನು ಒಡೆದಿರುವುದಾಗಿ ತಿಳಿದುಬಂದಿದೆ.



ಬಾಗಿಲು  ಒಡೆಯಲು ಬಳಸಿದ್ದ  ಪಿಕ್ಕಾಸನ್ನು ಕಳ್ಳರು  ಕಚೇರಿಯೊಳಗೆ  ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ. ಘಟನಾ  ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ. ಆದರೆ ದೂರು ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top