




ಸುಳ್ಯ: ಭಾರೀ ಮಳೆಗೆ ಅಲ್ಲಲಿ ಭೂಕುಸಿತವಾಗುತ್ತಿರುವುದು ಸುದ್ದಿಯಾಗುತ್ತಿದೆ.ಇದೀಗ ಸುಳ್ಯದಲ್ಲಿ ಮನೆಯೊಂದರ ಹಿಂಬದಿ ಗೋಡೆ ಕುಸಿದು ಕೂದಲೆಳೆ ಅಂತರದಲ್ಲಿ ಮನೆ ಮಂದಿ ಬದುಕುಳಿದ ಘಟನೆ ಜು.29ರಂದು ರಾತ್ರಿ ನಡೆದಿದೆ.
ಸುಳ್ಯದ
ಸಂಪಾಜೆ ಗ್ರಾಮದ ದಂಡಕಜೆಯಲ್ಲಿ ಈ ಘಟನೆ ಸಂಭವಿಸಿದ್ದು ಕಲ್ಲುಗುಂಡಿ
ದಂಡಕಜೆಯ ಮಧುಸೂದನ ಎಂಬವರ ಮನೆಯ ಹಿಂಬದಿಯಲ್ಲಿ ಗೋಡೆ
ಕುಸಿತಗೊಂಡಿರುವುದಾಗಿದೆ.
ಅಡುಗೆ
ಕೋಣೆಯೊಳಗೆ ಮನೆಯ ಐದು ಜನರು ರಾತ್ರಿ ಊಟಕ್ಕೆ ಕುಳಿತುಕೊಳ್ಳಲು ಹೋದ ಸಂದರ್ಭದಲ್ಲಿ ಏಕಾಏಕಿಯಾಗಿ ಗೋಡೆ
ಕುಸಿತಗೊಂಡಿದೆ ಎಂದು ತಿಳಿದು ಬಂದಿದೆ.
ಮನೆಯವರು
ಕೂದಲೆಳೆಯ ಅಂತರದಲ್ಲಿ ಭಾರೀ ಅಪಾಯದಿಂದ ಪಾರಾಗಿದ್ದು, ಅಡುಗೆ ಕೋಣೆಗೆ ಸಂಪೂರ್ಣ ಹಾನಿಯಾಗಿದೆ