




ಕಡಬ/ಸವಣೂರು : ಇತ್ತೀಚಿಗಿನ ದಿನಗಳಲ್ಲಿ ದ.ಕ ಜಿಲ್ಲೆ ಸಹಿತ ಹಲವೆಡೆ ಕುಸಿದು ಬಿದ್ದು ಮೃತಪಟ್ಟ ಸುದ್ದಿಗಳು ಕೇಳಿ ಬರುತ್ತಿವೆ. ಇದೀಗ ತೋಟದಲ್ಲಿ ಹುಲ್ಲು ಹೆರೆಯುತ್ತಿದ್ದಾಗ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸವಣೂರಿನಿಂದ ವರದಿಯಾಗಿದೆ.
ಪಾಲ್ತಾಡಿ
ಗ್ರಾಮದಿಂದ ಚೆನ್ನಾವರ ನಿವಾಸಿ ದಿ.ಸುಬ್ಬಣ್ಣ ನಾಯ್ಕ
ಎಂಬರ ಪತ್ನಿ ಸೀತಾ ಎಂಬವರು ಕುಸಿದು ಮೃತಪಟ್ಟವರು.
![]() |
ಮೃತ ಸೀತಾ ಅವರ ಭಾವ ಚಿತ್ರ |
ಜು.23ರಂದು ಚೆನ್ನಾವರದಲ್ಲಿ ತೋಟವೊಂದರಲ್ಲಿ ಹುಲ್ಲು ಹೆರೆಯುತ್ತಿದ್ದಾಗ ಅವರು ಕುಸಿದು ಬಿದ್ದಿದ್ದಾರೆಂದು ಹೇಳಲಾಗಿದೆ.
ಕೂಡಲೇ ಅವರನ್ನು ಸ್ಥಳೀಯ ಕ್ಲೀನಿಕ್ಗೆ ಕೊಂಡುಹೋಗಲಾಯಿತ್ತಾದರೂ ಅದಾಗಲೇ ಅವರು
ಮೃತಪಟ್ಟಿದ್ದರು. ಮೃತರು ಎರಡು ಗಂಡು,ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.