




ಸುಳ್ಯ: ಎರಡು ವರ್ಷದ ಹಿಂದೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾದ ಅನಂತರದ ಯಾವುದೇ ಗಲಭೆಗಳಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು 13 ಮಂದಿ ಯುವಕರು ಸುಳ್ಯದ ಕಲ್ಕುಡ ದೈವಸ್ಥಾನದಲ್ಲಿ ಜು. 22ರಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
![]() |
PHOTO CREDIT: IANS |
ನಂದಕುಮಾರ್, ಕಮಲಾಕ್ಷ, ಅರುಣ್ ರೈ, ಪದ್ಮನಾಭ ತಡಗಜೆ, ಪ್ರಶಾಂತ್, ಆನಂದ ಯು., ಧರ್ಮಪಾಲ, ಚಿದಾನಂದ ಬಾಳಿಲ, ಹರೀಶ್ ಬಾಳಿಲ, ಡಿಪಿನ್ ಎಡಮಂಗಲ, ಶಿವಾನಂದ, ಹರ್ಷಿತ್, ನಿತೀಶ್ ಕೆ. ಅವರ ಮೇಲೆ ಕೇಸು ದಾಖಲಿಸಲಾಗಿತ್ತು.
ಅವರೆಲ್ಲರೂ ನಾವು ಯಾರೂ ಈ ಘಟನೆಗಳಲ್ಲಿ ಭಾಗಿಯಾಗಿರುವುದಿಲ್ಲವೆಂದು ಹಿಂದೂ ಮುಖಂಡ ಶಿವ ಪೂಜಾರಿ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೈವಸ್ಥಾನದ ಅರ್ಚಕ ತಿಮ್ಮಪ್ಪ ನಾವೂರು ಉಪಸ್ಥಿತರಿದ್ದರು.