ಕಡಬ:ತೋಟ ಲೀಸ್ ಗೆ ಪಡೆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನ: ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಕಡಬ:ತೋಟ ಲೀಸ್ ಗೆ ಪಡೆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನ: ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Kadaba Times News

 ಕಡಬ: ತೋಟ ಲೀಸ್ ಗೆ ಪಡೆಯುವ ನೆಪದಲ್ಲಿ ಮನೆಯೊಂದಕ್ಕೆ ಬಂದ ವ್ಯಕ್ತಿಗಳಿಬ್ಬರು ತಮ್ಮ ವಾಹನದಲ್ಲಿ ಬೆಲೆಬಾಳುವ ಮೆಷಿನ್ ಕಟ್ಟಿ ಕೊಂಡುಹೋಗಲು ಯತ್ನಿಸಿದ ವೇಳೆ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಚಿಲಂಪಾಡಿಯಲ್ಲಿ ಜುಲೈ24 ರಂದು ಮುಂಜಾನೆ ನಡೆದಿದೆ.


ಕಡಬ ಸಮೀಪದ ಇಚಿಲಂಪಾಡಿ ಗ್ರಾಮದ  ನೇರ್ಲ ಎಂಬಲ್ಲಿನ ರವಿ ಗೌಡ  ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಪೇರಡ್ಕದ ವ್ಯಕ್ತಿಯೊಬ್ಬ ನಿಂತಿಕಲ್ಲಿನ ಯುವಕನನ್ನು ಕರೆದುಕೊಂಡು ಬಂದು ತೋಟವನ್ನು ತೋರಿಸಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.  ಮನೆಯವರು ಗಮನಿಸಿದ ವೇಳೆ ಮನೆ ಪಕ್ಕವಿದ್ದ ಹುಲ್ಲು ಹೆರೆಯುವ ಮಿಷನ್ ಮತ್ತು ಮದ್ದು ಬಿಡುವ ಪಂಪ್ ಸೆಟ್ ತನ್ನ ದ್ವಿಚಕ್ರ ವಾಹನದಲ್ಲಿ ಕಟ್ಟಿದ್ದಾನೆ. ಕೂಡಲೇ ಮನೆಯವರು ಬೊಬ್ಬೆ ಹೊಡೆದ ವೇಳೆ ರಸ್ತೆ ಬದಿಯ ಹೋಟೆಲೊಂದರಲ್ಲಿದ್ದವರು ಓಡಿ ಬಂದು ಅಡ್ಡಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.




ಬಳಿಕ ಕಡಬ ಪೊಲೀಸರು ಬಂದು ಇಬ್ಬರನ್ನೂ ಠಾಣೆಗೆ ಕರೆದೊಯ್ದಿರುವುದಾಗಿ ತಿಳೀದು ಬಂದಿದ್ದು ಪೊಲೀಸರ ವಿಚಾರಣೆಯ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.



Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top