




ಕಡಬ ಟೈಮ್ಸ್, ಸುಳ್ಯ: ಮಳೆಗಾಲದಲ್ಲಿ ವಾಹನಗಳ ಅಪಘಾತ ಹೆಚ್ಚುತ್ತಿದೆ. ಇದೀಗ ಟಯರ್ ಏಕಾಏಕಿ ಸಿಡಿದು ಕಾರೊಂದು ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದ ಘಟನೆ ಸುಳ್ಯದಿಂದ ವ್ರದಿಯಾಗಿದೆ.
ಜು.22ರಂದು ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಈ ಘಟನೆ ನಡೆದುದ್ದು ಚಾಲಕ ಅಪಾಯದಿಂದ
ಪಾರಾಗಿದ್ದಾರೆ.
ಮಂಗಳೂರಿನಿಂದ ಮಡಿಕೇರಿಯ ಕುಶಾಲನಗರಕ್ಕೆ ತೆರಳುತ್ತಿದ್ದ ಕುಶಾಲನಗರದ ಧನಂಜಯ ಎಂಬವರು ಚಲಾಯಿಸುತ್ತಿದ್ದ ಕಾರು ಕದಿಕಡ್ಕದ ತಲುಪುತ್ತಿದ್ದಂತೆ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದಿದೆ .
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಆಗಮಿಸಿ ರಕ್ಷಣೆಗೆ ಧಾವಿಸಿ ಬಂದಿದ್ದಾರೆ.