




ಕಡಬ: ಇಲ್ಲಿನ ಪಂಜ ಅರಣ್ಯ ವಲಯ ವ್ಯಾಪ್ತಿಯ ಬಲ್ಯದಲ್ಲಿ ಶಿಕಾರಿಗೆ ತೆರಳಿದವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಜುಲೈ 22ರ ನಸುಕಿನ ವೇಳೆ ನಡೆದಿದೆ.
ಬಂಧಿತರಿಂದ ನಾಡ ಕೋವಿ ಸಹಿತ
ಭೇಟೆಯಾಡಿದ ಸತ್ತ ಬರ್ಕಾ(ಮೌಸ್ ಡೀರ್)
ಕಾಡು ಪ್ರಾಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯ್, ಹೇಮಂತ್, ಸಜಿ ಬಂಧಿತರಾಗಿದ್ದು ಪ್ರವೀಣ್ ಎಂಬಾತ ತಪ್ಪಿಸಿಕೊಂಡಿದ್ದಾನೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಟ್ರುಪ್ಪಾಡಿ
ಗ್ರಾ.ಪಂ ನ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿ ಯಶೋಧರ
ಗೌಡ ಎಂಬವರಿಗೆ ಸೇರಿದ ಜಾಗದ ತೆಂಗಿನ ತೋಟದಲ್ಲಿ ಕಾಡು
ಪ್ರಾಣಿ ಭೇಟೆಯಾಡುತ್ತಿದ್ದ ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಜಾಗದ ಮಾಲಿಕರ ವಿರುದ್ದವೂ ಪ್ರಕರಣ ದಾಖಲಾಗಿದೆ ಎಂದು
ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ
ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಜಯಕುಮಾರ್,
ಸುನಿಲ್ ಕುಮಾರ್, ಬೀಟ್ ಫಾರೆಸ್ಟ್ ರವಿ ಕುಮಾರ್ ,ಫಾರೆಸ್ಟ್ ದೇವಿ ಪ್ರಸಾದ್, ವಾಚರ್ ಗಣೇಶ್ ಹೆಗ್ಡೆ,
ಚಾಲಕ ಪದ್ಮ ಕುಮಾರ್ ಭಾಗವಹಿಸಿದ್ದರು. ಉಪ ಸಂರಕ್ಷಣಾ ಅಧಿಕಾರಿ ಮರಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾ
ಅಧಿಕಾರಿ ಪ್ರವೀಣ್ ಶೆಟ್ಟಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಆರ್ ಎಫ್,ಒ ಅಕ್ಷಯ್ ಪ್ರಕಾಶ್ ಕರ್ (IFS)ತನಿಖೆ ನಡೆಸುತ್ತಿದ್ದಾರೆ.