Attempted theft by breaking the lock: ಕಡಬದ ಸರ್ಕಾರಿ ಶಾಲೆಯೊಂದಕ್ಕೆ ನುಗ್ಗಿದ ಕಳ್ಳರು:ಬೀಗ ಮುರಿದು ಮಾಡಿದ್ದೇನು?

Attempted theft by breaking the lock: ಕಡಬದ ಸರ್ಕಾರಿ ಶಾಲೆಯೊಂದಕ್ಕೆ ನುಗ್ಗಿದ ಕಳ್ಳರು:ಬೀಗ ಮುರಿದು ಮಾಡಿದ್ದೇನು?

Kadaba Times News

ಕಡಬ: ಅಧಿಕ ಮಳೆ ಹಿನ್ನೆಲೆ ಶಾಲೆಗೆ ರಜೆ ನೀಡಿದ್ದ ಸಂದರ್ಭದಲ್ಲಿ ಎಡಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳ್ಳರು ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ  ಘಟನೆ ಬೆಳಕಿಗೆ ಬಂದಿದೆ.


ಜುಲೈ 17 ರಿಂದ ಜುಲೈ 19 ರ ನಡುವೆ ಈ ಕಳ್ಳತನ ನಡೆದಿರಬಹುದೆಂದು ಅನುಮಾನಿಸಲಾಗಿದೆ.  ಶಾಲೆಯ ಮುಖ್ಯ ದ್ವಾರದ ಶೆಟರ್ ಬಾಗಿಲ ಬೀಗವನ್ನು,  ಶಾಲಾ ಕೊಠಡಿಗಳ ಭದ್ರಪಡಿಸಿದ ಬೀಗಗಳನ್ನು ಒಡೆದು ಒಳಪ್ರವೇಶಿಸಿ ಮುಖ್ಯ ಶಿಕ್ಷಕರ ಕೊಠಡಿಯಲ್ಲಿದ್ದ ಎರಡು ಲ್ಯಾಪ್ ಟಾಪ್ ಹಾಗೂ ಒಂದು ಕಂಪ್ಯೂಟರ್ ಅನ್ನು ಮತ್ತು ನೋಟೀಸು ಬೋರ್ಡ್, ಕಿಟಕಿಗಳ ಗ್ಲಾಸ್, ಮುಖ್ಯ ಶಿಕ್ಷಕರ ನಾಮಫಲಕವನ್ನು ಹಾನಿ ಮಾಡಿಲಾಗಿದೆ.ಅಲ್ಲದೆ  ಕಪಾಟುಗಳನ್ನು ತೆರೆದು ಅದರಲ್ಲಿದ್ದ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಾಗಿ ತಿಳಿದು ಬಂದಿದೆ.



ಸ್ಥಳೀಯರೊಬ್ಬರು  ಶಾಲಾ ಮುಖ್ಯಸ್ಥರಿಗೆ  ಪೋನ್ ಮಾಡಿ ಶಾಲೆಯಲ್ಲಿ ನಡೆದ ಘಟನೆಯನ್ನು ತಿಳಿಸಿದ್ದು, ಅದರಂತೆ ಶಾಲಾ  ಶಿಕ್ಷಕರು ಮತ್ತು ಪೋಷಕರು, ಎಸ್ ಡಿ ಎಮ್ ಸಿ ರವರು ಬಂದು ನೋಡಿದಾಗ ಕಳ್ಳರು ಬಂದಿರುವುದು ದೃಢವಾಗಿದೆ.


ಈ ಬಗ್ಗೆ ಎಡಮಂಗಲ ಪ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್    ಅವರು ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಾನಿಯಾದ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 85,000/- ಆಗಬಹುದು  ಎಂದು ಅಂದಾಜಿಸಲಾಗಿದೆ.  ಬಗ್ಗೆ  ಠಾಣಾ .ಕ್ರ 65/2024 ಕಲಂ 324(4), 331(3), 331(4) ಬಿ ಎನ್ ಎಸ್ Act 2023 ರಂತೆ ಪ್ರಕರಣ ದಾಖಲಾಗಿರುತ್ತದೆ.



Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top