




ಕಡಬ/ಸವಣೂರು: ಉಳ್ಳಾಲ ಖಾಝಿ, ಮರ್ಹೂ೦ ಶೈಖುನಾ ತಾಜುಲ್ ಉಲಮಾ ಅಸೈಯದ್ ಅಬ್ದುರಹ್ಮಾನ್ ಅಲ್ ಬುಖಾರಿ ತಂಜಳ್ ಅವರ ಪುತ್ರ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಬುಖಾರಿ (ಕೂರತ್ ತಂಙಳ್) (65 ವ) ಜು.8ರಂದು ಬೆಳಗ್ಗೆ ನಿಧನರಾಗಿದ್ದರು.
ಕಡಬ ತಾಲೂಕಿನ ಸವಣೂರು ಸಮೀಪದ ಕುದ್ಮಾರಿನ ಕೂರತ್ ನಲ್ಲಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಅಂತಿಮ ದರ್ಶನಕ್ಕೆ ಮಸೀದಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಾವಿರಾರು
ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ಸ್ವಯಂ ಸೇವಕರು ಹರ ಸಾಹಸ ಪಡುತ್ತಿದ್ದ
ದೃಶ್ಯ ಕಂಡು ಬಂತು. ಮಸೀದಿ ವಠಾರದಲ್ಲಿ ಜನರು ಭರ್ತಿ ಆಗಿ ರಸ್ತೆಯಲ್ಲಿ ಸಾವಿರಾರು ಮಂದಿ ನಿಂತುಕೊಂದಿದ್ದರು.
ಹಲವಾರು ಮಂದಿ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂತು.
ಸ್ಪೀಕರ್ ಯುಟಿ ಖಾದರ್, ಶಾಸಕ ಅಶೋಕ್ ರೈ ಕೂಡಾ ಸ್ಥಳದಲ್ಲಿದ್ದರು. ಸೇರಿದ್ದ ಬಹುತೇಕರಿಗೆ ಮೃತದೇಹ
ನೋಡಲು ಸಾಧ್ಯವಾಗಿಲ್ಲ. ಬಳಿಕ ಸಮೀಪದ ಕುದ್ಮಾರು ಎಂಬಲ್ಲಿರುವ ಕೂರತ್ ತಂಙಳ್ ಅವರಿಗೆ ಸೇರಿದ ಜಾಗದಲ್ಲಿ
ದಫನ ಮಾಡಲಾಯಿತು.
ಸಮಸ್ತ
ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ ಕಾಸರಗೋಡು ದೇಳಿಯ ಜಾಮಿಯ ಸಅದಿಯ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೂರತ್ ತಂಜಳ್ ಅವರು 2014ರಲ್ಲಿ ತಾಜುಲ್ ಉಲಮಾ ನಿಧನರಾದ ಬಳಿಕ ಉಳ್ಳಾಲ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.