




ಕಡಬ:ಮುಂಜಾನೆ ವೇಳೆ ಹುಲ್ಲು ತರಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಡಬ ಠಾಣ್ಯಾ ವ್ಯಾಪ್ತಿಯ ಪೆರಾಬೆ ಗ್ರಾಮದಿಂದ ವರದಿಯಾಗಿದೆ.
ಆಲಂಕಾರಿನ ಪೆರಾಬೆ ಗ್ರಾಮದ ಬಲಂಪೋಡಿಯ ಉಮೇಶ್ ಎಂಬವರ ಪತ್ನಿ ಶಶಿಕಲಾ ಎಂಬವರು ಮೃತಪಟ್ಟ ಮಹಿಳೆ.
ಜುಲೈ 8 ರ ಮುಂಜಾನೆ ಪತಿ –ಪತ್ನಿ ಇಬ್ಬರೂ
ದನದ ಕೊಟ್ಟಿಗೆಯಲ್ಲಿ ಕೆಲಸ
ಮಾಡ ತೆರಳಿದ್ದು ಬಳಿಕ ಪತ್ನಿಯು
ದನಗಳಿಗೆ ಹುಲ್ಲು ತರಲು ತಮ್ಮ ಕೃಷಿ ತೋಟದ ಕಡೆಗೆ ಹೋಗಿದ್ದರು.
ದನಗಳನ್ನು ಸ್ವಚ್ಚ ಮಾಡಿ ಮನೆಯಲ್ಲಿ
ಇದ್ದು ಸುಮಾರು 1 ಗಂಟೆಯಾದರು ಪತ್ನಿ ಮನೆಗೆ ಬಾರದೇ ಇರುವುದರಿಂದ ತಮ್ಮ ತೋಟದ ಬಳಿ ಹೋಗಿ ನೋಡಿದಾಗ ಪತ್ನಿಯು ಕಾಣದೇ ಇದ್ದು ನೆರೆಕೆರೆಯವರ ಜೊತೆ ಸೇರಿ
ಹುಡುಕಾಟ ಮಾಡಿದಾಗ ಕೆರೆಯಲ್ಲಿ
ಬಿದ್ದಿರುವುದು ಕಂಡುಬಂದಿದೆ.
ಕೆರೆಯಿಂದ ಮೇಲಕ್ಕೆ ಎತ್ತಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದ್ದು
ತೋಟಕ್ಕೆ
ಹುಲ್ಲು ತರಲು ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂದು ಪತಿ ನೀಡಿದ ದೂರಿನಲ್ಲಿ
ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.