




ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕ ಬಳಿ ಎಡೆಬಿಡದೆ ಸುರಿದ ಮಳೆಗೆ ಚರಂಡಿಯಲ್ಲಿ ಸಮರ್ಪಕ ನೀರು ಹರಿದು ಹೋಗದ ಕಾರಣ ರಸ್ತೆಯಲ್ಲೇ ನೀರು ನಿಂತು ವಾಹನಗಳ ಓಡಾಟಕ್ಕೆ ಅಡಚಣೆಯಾಗಿದೆ.
ಕಡಬ-ಪಂಜ
ಮುಖ್ಯ ರಸ್ತೆಯ ಕಲ್ಲಂತಡ್ಕ ಬಳಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಇತ್ತೀಚೆಗೆ
ಇಲ್ಲಿ ಚರಂಡಿ ದುರಸ್ತಿ ಮಾಡಿದರೂ ವ್ಯವಸ್ಥಿತಿತವಾಗಿ ಮಾಡಿಲ್ಲ ಎಂಬುದು ವಾಹನ ಸವಾರರು ಮತ್ತು ಸಾರ್ವಜನಿಕರ
ದೂರು. ಕಾಟಚಾರ ಎಂಬಂತೆ ಸಣ್ಣ ರೂಪದಲ್ಲಿ ಚರಂಡಿ ದುರಸ್ತಿಗೊಳಿಸಿರುವ ಆರೋಪ ಕೇಳಿ ಬಂದಿದೆ.
ಮುಖ್ಯ
ರಸ್ತೆಯಲ್ಲೇ ನೀರು ನಿಂತ ಪರಿಣಾಮ ದ್ವಿಚಕ್ರ ವಾಹನ ಸವಾರರು ಅತೀ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.
ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಕಡಬದಿಂದ
ಕೋಡಿಂಬಾಳವರೆಗಿನ ರಸ್ತೆಯ ಇಕ್ಕೆಳಗಳಲ್ಲಿ ಚರಂಡಿಗಳಲ್ಲಿ ಗಿಡ ಗಂಟಿಗಳು ಬೆಳೆದಿವೆ.ಚರಂಡಿಗಳ ಸಮರ್ಪಕ
ನಿರ್ವಣೆಗೆ ಪಟ್ಟಣ ಪಂಚಾಯತ್ ಆಗಲಿ ಅಥವಾ ಲೋಕೋಪಯೋಗಿ ಇಲಾಖೆಯಾಗಲಿ ಮುಂದಾಗದಿರುವುದು ಯಾಕೆ ಎಂಬ ಪ್ರಶ್ನೆ
ಸಾರ್ವಜನಿಕರದ್ದಾಗಿದೆ.