ಕುಕ್ಕೆ ಸುಬ್ರಹ್ಮಣ್ಯ: ಮಹಾ ಮಳೆಗೆ ಎರಡನೇ ಬಾರಿ ಮತ್ತೆ ಮುಳುಗಡೆಯಾದ ಕುಮಾರಧಾರಾ ಸ್ನಾನಘಟ್ಟ

ಕುಕ್ಕೆ ಸುಬ್ರಹ್ಮಣ್ಯ: ಮಹಾ ಮಳೆಗೆ ಎರಡನೇ ಬಾರಿ ಮತ್ತೆ ಮುಳುಗಡೆಯಾದ ಕುಮಾರಧಾರಾ ಸ್ನಾನಘಟ್ಟ

Kadaba Times News

ಕುಕ್ಕೆ ಸುಬ್ರಹ್ಮಣ್ಯ:   ಕುಮಾರ ಪರ್ವತ ಶ್ರೇಣಿಯ  ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಕಾರಣ    ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಎರಡನೇ ಬಾರಿ ಮತ್ತೆ ಮುಳುಗಡೆಯಾಗಿದೆ.


ಯಾತ್ರಾರ್ಥಿಗಳಿಗೆ ತೀರ್ಥಸ್ನಾನ ನೆರವೇರಿಸಲು ತೊಂದರೆಯಾಗಿದ್ದು, ನದಿ ನೀರನ್ನು ಡ್ರಮ್ ಮೂಲಕ ಸಂಗ್ರಹಿಸಿ ಭಕ್ತರಿಗೆ ತೀರ್ಥಸ್ನಾನಕ್ಕೆ ಅವಕಾಶ ನೀಡಲಾಗಿದೆ. ಇನ್ನು ನದಿ ತುಂಬಿ ಹರಿಯುತ್ತಿರುವ ಹಿನ್ನಲೆ ನದಿ ಪಾತ್ರಕ್ಕೆ ಭಕ್ತಾಧಿಗಳು ತೆರಳದಂತೆ ಕ್ಷೇತ್ರದ ವತಿಯಿಂದ ಸೂಚನೆ ನೀಡಲಾಗಿದ್ದು, ಸ್ನಾನಘಟ್ಟದ ಬಳಿ ಹೋಮ್ ಗಾರ್ಡ್ ಮತ್ತು ದೇವಸ್ಥಾನದ ಸೆಕ್ಯುರಿಟಿಗಳ ನೇಮಕ ಮಾಡಲಾಗಿದೆ.



ಇನ್ನು ಕುಮಾರಧಾರಾ ನದಿ ತುಂಬಿ ಹರಿಯುತ್ತಿರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ದೇವರ ಮೀನುಗಳು ಆಗಮಿಸಿದೆ. ವೇಳೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು ಸ್ನಾನಘಟ್ಟದ ಬಳಿ ಬಂದ ದೇವರ ಮೀನುಗಳಿಗೆ ಆಹಾರ ನೀಡಿದ್ದಾರೆ


ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಈಗಾಗಲೇ ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ . ನಡುವೆ ಘಟ್ಟ ಪ್ರದೇಶದಲ್ಲೂ ಮಳೆಯಾಗುತ್ತಿರುವ ಹಿನ್ನಲೆ ಕರಾವಳಿಯ ನದಿಗಳು ತುಂಬಿ ಹರಿಯುತ್ತಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top