ರೈಲ್ವೇ ಸಿಬ್ಬಂದಿಗಳ ಸಮಯ ಪ್ರಜ್ಞೆ : ಬೆಂಗಳೂರಿಗೆ ತೆರಳಲು ಮುಂದಾಗಿದ್ದ ಅಪ್ರಾಪ್ತ ಬಾಲಕರ ರಕ್ಷಣೆ

ರೈಲ್ವೇ ಸಿಬ್ಬಂದಿಗಳ ಸಮಯ ಪ್ರಜ್ಞೆ : ಬೆಂಗಳೂರಿಗೆ ತೆರಳಲು ಮುಂದಾಗಿದ್ದ ಅಪ್ರಾಪ್ತ ಬಾಲಕರ ರಕ್ಷಣೆ

Kadaba Times News

ಪುತ್ತೂರು ರೈಲು ನಿಲ್ದಾಣದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ವಸತಿ ನಿಲಯದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ತೆರಳಲು ಮುಂದಾಗಿದ್ದ ನಾಲ್ವರು ಅಪ್ರಾಪ್ತ ವಯಸಿನ ವಿದ್ಯಾರ್ಥಿಗಳು  ಮತ್ತೆ ಹಾಸ್ಟೇಲ್ಸೇರುವಂತಾಗಿದೆ.

 ಘಟನೆ ಜು.13ರಂದು ನಡೆದಿದ್ದು  ಮದ್ಯಾಹ್ನದ ವೇಳೆ  ಹಾಸ್ಟೆಲ್ನಿಂದ ತಪ್ಪಿಸಿಕೊಂಡು ನಾಲ್ವರು ವಿದ್ಯಾರ್ಥಿಗಳು ರೈಲು ನಿಲ್ದಾಣಕ್ಕೆ ಬಂದಿದ್ದಾರೆ.  ಟಿಕೆಟ್ಕೌಂಟರ್ಬಳಿ ಬಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಹೊರಡುವ ರೈಲಿನ ಬಗ್ಗೆ ಮಾಹಿತಿ ಪಡೆದು ಟಿಕೆಟ್ನೀಡುವಂತೆ ಕೇಳಿದ್ದಾರೆ.




ನಾಲ್ವರು ಬಾಲಕರ ವರ್ತನೆಯನ್ನು ಗಮನಿಸಿ ಸಂಶಯಗೊಂಡ ಪಕ್ಕದಲ್ಲಿದ್ದ ರೈಲ್ವೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಸತ್ಯ ವಿಷಯ ಹೊರ ಬಂದಿದೆ. ನಾವು ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದು , ಅಲ್ಲಿನ ಮುಖ್ಯಸ್ಥರ ದೌರ್ಜನ್ಯದಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಬಾಲಕರು ಹೇಳಿದ್ದಾರೆ. ಸಂಶಯಗೊಂಡ ರೈಲ್ವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕರನ್ನು ವಿಚಾರಣೆ ನಡೆಸಿ ಅವರ ಮನವೊಲಿಸಿ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸದ್ಯ ನಾಲ್ವರು ಪೋಷಕರ ಜೊತೆಯಲ್ಲಿದ್ದು ಪ್ರಕರಣ ಸುಖಾಂತ್ಯಗೊಂಡಿದೆ

ಪುತ್ತೂರು ರೈಲು ನಿಲ್ದಾಣದ ಸಿನಿಯರ್ ಟೆಕ್ಸಿಬ್ಬಂದಿಗಳಾದ ಕುಮಾರ್‌, ವಾಸಿಮ್ಸಯ್ಯದ್‌, ವಸಂತ್‌, ಮಾಲಶ್ರೀ ಅವರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top