ಸಂಪಾದಕೀಯ: ಕಡಬ ಟೈಮ್ಸ್ ಸದಾಕಾಲ ಜನಪರ, ಸತ್ಯ ನಿಷ್ಠೆಯಿಂದ ಜನಾಭಿಪ್ರಾಯ ರೂಪಿಸುವ ಸ್ವತಂತ್ರ ಮಾಧ್ಯಮ-ವಿ.ಕೆ ಕಡಬ

Kadaba Times News

ಕಡಬ ಟೈಮ್ಸ್(KADABA TIMES): ಕಡಬ ಟೈಮ್ಸ್ ನಲ್ಲಿ  ವೆಬ್ ತಾಣದಲ್ಲಿ  ಕಡಬ ತಾಲೂಕು ಕೇಂದ್ರಿತ ಸುದ್ದಿಗಳು ಹೆಚ್ಚು ಪ್ರಕಟವಾಗುತ್ತಿದೆ. ಕಡಬ ಟೈಮ್ಸ್ ಜನರ ಧ್ವನಿಯನ್ನು ಸಮಾಜಕ್ಕೆ ತಿಳಿಸುವ ವೇದಿಕೆಯಾಗಿ ಕೆಲಸ ಮಾಡುತ್ತಿದ್ದು ಇದೊಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ  ಡಿಜಿಟಲ್ ಮಾದ್ಯಮವಾಗಿದೆ.

ಎಲ್ಲಾ ಜನ ಸಮುದಾಯದ ಸುದ್ದಿಗಳನ್ನು  ರಾಜಕೀಯ, ಧರ್ಮ ,ಜಾತಿ ಬೇಧವಿಲ್ಲದೆ ಮುಕ್ತವಾಗಿ ನಿರಂತರವಾಗಿ ಪ್ರಕಟಿಸುತ್ತಾ ಬಂದಿದ್ದೇವೆ.   ನಮ್ಮ ವೆಬ್ ತಾಣದಲ್ಲಿ ಪ್ರಕಟವಾಗುವ ಎಲ್ಲಾ ಸುದ್ದಿಗಳೂ ಸತ್ಯಾಸತ್ಯೆಯಿಂದ  ಕೂಡಿರುತ್ತದೆ. ಸದಾಕಾಲ ಜನಪರ,  ಸತ್ಯ ನಿಷ್ಠೆಯಿಂದ ಇರುವಂತೆ ಗಮನಹರಿಸುತ್ತಾ ಇರುತ್ತೇವೆ .  ನಾವು ಪ್ರಕಟಿಸುವ ಸುದ್ದಿಗಳಲ್ಲಿ ಯಾವುದೇ ವ್ಯಕ್ತಿಯನ್ನಾಗಲಿ ಅಥವಾ ಅಧಿಕಾರಿಯನ್ನು ಗುರಿಯಾಗಿಸಿ ತೆಜೋವಧೆ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಆಯಾಯ ಸಮಯಕ್ಕೆ ರೂಪುಗೊಳ್ಳುವ ಘಟನೆಗಳನ್ನು ಆಧಾರಿಸಿ ಅವಲೋಕವಾಗಿಯೂ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ.


ಸಾಮಾಜಿಕ ನ್ಯಾಯ,ಪರಿಸರ ಕಾಳಜಿ, ಸಂಪನ್ಮೂಲಗಳ ರಕ್ಷಣೆ, ರಾಜಕೀಯ ಬೆಳವಣಿಗೆ,ಅಭಿವೃದ್ದಿ ವಿಚಾರಗಳನ್ನು ಆಗಾಗ ಜನಧ್ವನಿಯಾಗಿ ಪ್ರಕಟಿಸುತ್ತಾ ಬಂದಿದೆ.   ಸರಕಾರ ಮತ್ತು ಜನತೆಯ ನಡುವೆ ಮಾಧ್ಯಮಗಳು ಸೇತುವೆಗಳಾಗಿ ಕೆಲಸ ಮಾಡುವಂತೆ ನಾವೂ ಅವುಗಳನ್ನು ಪಾಲಿಸುತ್ತಿದ್ದೇವೆ.   ಸಂವಿಧಾನಬದ್ಧ ಆಡಳಿತ ಸಂಸ್ಥೆಗಳು ಹದ್ದುಮೀರಿದಾಗ ಅವುಗಳ ಹೊಣೆಗಾರಿಕೆಯನ್ನು ನೆನಪಿಸುವ, ಜನಪರವಾಗಿರುವಂತೆ ನೋಡಿಕೊಳ್ಳುವ, ಶಾಸನಸಭೆಗಳು ರೂಪಿಸುವ ಶಾಸನಗಳ ಬಗ್ಗೆ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಇವು ಮೊದಲಿನಿಂದಲೂ ಮಾಡಿಕೊಂಡು ಬಂದಿವೆ .

ಆದರೆ ಇತ್ತೀಚೆಗೆ ಯಾವುದಾದರೂ ಅನಧಿಕೃತ ವ್ಯವಹಾರ,ವಿಚಾರಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಕೂಡಲೇ ಅವುಗಳ ವಿರುದ್ಧ ಕೇಸು ದಾಖಲಿಸುವ , ಮಾನನಷ್ಟ ಮೊಕದ್ದಮೆ ಹೂಡುವ ಪ್ರವೃತ್ತಿ ಹೆಚ್ಚುತ್ತಿದೆ. ಒತ್ತಡ,ಬೆದರಿಕೆ, ತೆಜೋವಧೆ ಮಾಡುವ ಪ್ರಸಂಗಗಳೂ ನಡೆದರೂ ನಾವು ಅಂತಹ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸುಕೊಳ್ಳುವುದೇ ಇಲ್ಲ.   ಇಂಥ ಸುದ್ದಿಗಳನ್ನು ಪ್ರಕಟಿಸಿದಂತೆ ತಡೆಯಾಜ್ಞೆ  ತರುವ ಚಾಳಿ ಕೂಡ ಅಧಿಕವಾಗಿದೆ. ಇದರಿಂದ ಮಾಧ್ಯಮಗಳ ಸುಗಮ ಕಾರ್ಯ ನಿರ್ವಹಣೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ. ಇದೀಗ ಮಾಧ್ಯಮಗಳಿಗೆ ಪೂರ್ಣ ಸ್ವಾತಂತ್ರ್ಯವಿರಬೇಕು ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿರುವುದನ್ನು ನೆನಪಿಸಿಕೊಳ್ಳಬೇಕು.

ಅದಾಗಿಯೂ  ಪೂರ್ಣ ಮಾಹಿತಿ ಇರದ ಸುದ್ದಿಗಳು ಪ್ರಕಟವಾಗಿದ್ದು ಓದುಗರ ಗಮನಕ್ಕೆ ಬಂದರೆ ನೇರವಾಗಿ ಪೋನ್ ಮೂಲಕ ಅಥವಾ ವಾಟ್ಸಪ್ ಮೂಲಕ  +91 93804 74819 ಸಂಖ್ಯೆಗೆ  ತಿಳಿಸಬಹುದಾಗಿದೆ. ಕಡಬ ಟೈಮ್ಸ್ ಹೆಸರಿನಲ್ಲಿ ನಿಮಗೆ ಯಾರಾದರೂ ಕರೆ ಮಾಡಿ ತೊಂದರೆ ಕೊಡುತ್ತಿದ್ದರೆ ಅಥವಾ ಬ್ಲಾಕ್ ಮೇಲ್ ಮಾಡಲು ಯತ್ನಿಸುವ ಘಟನೆಗಳು ಸಂಭವಿಸಿದಲ್ಲಿ ನಮ್ಮ ಸಂಪಾದಕರನ್ನು ಸಂಪರ್ಕಿಸಿ.ಅಥವಾ ಪೂರಕ ದಾಖಲೆಯೊಂದಿಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಸಲ್ಲಿಸಬಹುದಾಗಿದೆ. –ವಿ.ಕೆ ಕಡಬ( ಪ್ರಧಾನ ಸಂಪಾದಕರು), ಕಡಬ ಟೈಮ್ 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top