ಸಂಪಾದಕೀಯ: ಕಡಬದಲ್ಲಿ ಮರಳು ದಂಧೆಕೋರರಿಂದ ಕೊಲೆ ಬೆದರಿಕೆ ವಿಚಾರ: ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸತ್ಯಾಸತ್ಯತೆ ತಿಳಿಸಬೇಕು

Kadaba Times News

ಕಡಬ ಟೈಮ್ಸ್(KADABA TIMES): ಕಡಬದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ಇಂದು ನಿನ್ನೆಯದಲ್ಲ,ಹಲವು ವರ್ಷಗಳಿಂದ ಕಾನೂನು ಮೀರಿ ರಾಜಕೀಯ ಪ್ರಭಾವ ಬಳಸಿಕೊಂಡು  ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಕೋಡಿಂಬಾಳ ಗ್ರಾಮದ ಕೋರಿಯರ್ ಎಂಬಲ್ಲಿ ಅಕ್ರಮ ಮರಳು ದಂಧೆಕೋರರು ಪತ್ರಕರ್ತರ ಮೇಲೆ ಹಲ್ಲೆಗೆ ಮುಂದಾಗಿ  ರೌಡಿಸಂ ತೋರಿದ್ದರು .ಬಳಿಕ ಸುಳ್ಳು ಕೇಸು ನೀಡಿ ಜೈಲುಗಟ್ಟುವ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ಆ ಸಮಯದಲ್ಲಿದ್ದ  ಅಧಿಕಾರಿಗಳೂ ದಂಧೆಕೋರರಿಗೆ ಸಾಥ್ ನೀಡಿದ್ದರು. ಕೋರ್ಟಿನಲ್ಲಿ ಸುಳ್ಳು ಕೇಸು ಬಿದ್ದು ಹೋಗಿರುವುದು  ಎಲ್ಲರಿಗೂ ಗೊತ್ತಿರುವ ಸಂಗತಿ.


ಇತ್ತೀಚೆಗೆ ನಿಯಮ ಬಾಹಿರವಾಗಿ ಮರಳು ಗಾರಿಕೆ ಮಾಡುತ್ತಿರುವ   ಕಡಬದ ಭಾಸ್ಕರ ಗೌಡ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.   ಅದರಂತೆ ಅಕ್ರಮ ಮರಳುಗಾರಿಕೆ ಮಾಡುತ್ತಿರುವುದು ಸಾಬೀತಾಗಿ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳು ತೆಗೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

ಇದೀಗ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಗೆ  ಗಾಂಜಾ ಸೇವನೆಯ ಎರಡು ಮುಸ್ಲಿಂ   ಹುಡುಗರನ್ನು ಬಿಟ್ಟು  ಗಾಂಜಾ ಅಮಲಿನಲ್ಲಿ ಕೊಲೆ ಮಾಡುವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ   ಪುತ್ತೂರು ಡಿವೈಎಸ್ಪಿ ಗೆ ದೂರು ನೀಡಿದ್ದಾರೆ.  ಜಿಲ್ಲೆಯಲ್ಲಿ ಈಗಾಗಲೇ ಹಲವೆಡೆ ಪೊಲೀಸ್ ಇಲಾಖೆ ಬೆಚ್ಚಿಬೀಳುವ ರೀತಿಯಲ್ಲಿ ಕೊಲೆ ಪ್ರಕರರಣಗಳು ನಡೆದಿದೆ.    ಭಾಸ್ಕರ ಗೌಡ ಅವರ ಬಳಿ ಕೊಲೆ ಬೆದರಿಕೆ ಒಡ್ಡಿದ ವಿಚಾರಕ್ಕೆ ಪೂರಕ ಪೋನ್ ಕರೆ ಆಡಿಯೋವಿದೆ ಎಂದು ಅವರೇ ಹೇಳುತ್ತಾರೆ,  ಇದನ್ನು ತನಿಖೆಯ ಸಂದರ್ಭದಲ್ಲಿ ಅವರು ಹಾಜರುಪಡಿಸಲು ಸಿದ್ದರಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ  ಯಾವುದೇ ಪ್ರಭಾವಕ್ಕೆ ಒಳಗಾಗದೆ  ಸತ್ಯಾಸತ್ಯಾತೆ ತಿಳಿಸಬೇಕು. ಈ ದಂಧೆಯ ಹಿಂದಿರುವ ಮಿನಿ ರೌಡಿಗಳು, ರಾಜಕೀಯ ಪಕ್ಷದವರ ಬಗ್ಗೆ ಮಾಹಿತಿ ಕಲೆ ಹಾಕಿ ನೈಜ ವಿಚಾರವನ್ನು ಸಾರ್ವಜನಿಕಗೊಳಿಸಬೇಕು. ದೂರಿನಲ್ಲಿ ಸತ್ಯಾಂಶ ಇಲ್ಲದಿದ್ದಲ್ಲಿ  ಅದಕ್ಕೂ ಇಲಾಖೆ ಸೂಕ್ತ ಕ್ರಮವನ್ನು ಜರುಗಿಸಬೇಕು .

ದೂರುದಾರರು ಡಿವೈಎಸ್ಪಿ ಗೆ ನೀಡಿದ ದೂರಿನಲ್ಲಿಅಧಿಕಾರಿಗಳಿಗೂ ಕಪ್ಪ ಕಾಣಿಕೆ ನೀಡುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.  ಹೀಗಾಗಿ ಯಾವ ಇಲಾಖೆಯ ಅಧಿಕಾರಿಗಳು ಹಣ ಪಡೆದು ಇಂತಹ ದಂಧೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂಬುದರ ಕುರಿತೂ ಸಮಗ್ರ ವಿಚಾರಣೆಯಾಗಬೇಕು.ದೂರಿನಲ್ಲಿ ಉಲ್ಲೇಖಿಸಿರುವ ಎಲ್ಲರನ್ನೂ ಸೂಕ್ತ ವಿಚಾರಣೆಗೆ ಒಳಪಡಿಸಬೇಕು.   ದಂಧೆ ಕೋರರು ಕಾನೂನಿನ ಭಯವಿಲ್ಲದೆ ರಾಜರೋಷವಾಗಿ ತಿರುಗಾಡಲು, ಸುದ್ದಿ ಬಿತ್ತರಿಸುವ ಹಾಗೂ ಈ ವಿಚಾರವಾಗಿ ಹೋರಾಡುವವರಿಗೆ ದಮ್ಕಿ ಹಾಕಲಾಗುತ್ತಿದೆ.

ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಅಕ್ರಮ ಮರಳು ಗಾರಿಕೆ ಬಗ್ಗೆ ಮಾಹಿತಿ ನೀಡಿದರೆ  ಅದನ್ನು ದಂಧೆ ಕೋರರಿಗೆ  ಯಥಾವತ್ತಾಗಿ ಮಾಹಿತಿ ರವಾನಿಸುವ ಪ್ರಸಂಗಗಳು ಹಿಂದೆ ನಡೆದಿತ್ತು. ಮರಳು ದಂಧೆಯ ಬಗ್ಗೆ ಪ್ರಶ್ನಿಸಿದವರಿಗೆ ಕೊಲೆ ಬೆದರಿಕೆ ಬರುವುದಾದರೆ ಇನ್ನು ಅಲ್ಲಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ನಡೆಯುವುದನ್ನು ವರದಿ ಮಾಡುವ ಪತ್ರಕರ್ತರಿಗೂ ಕೊಲೆ ಬೆದರಿಕೆ ಬರುವುದರಲ್ಲಿ ಸಂದೇಹವಿಲ್ಲ.  ಹೀಗಾಗಿ ಕಾಲ ಮಿಂಚುವ ಮುನ್ನ  ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಇದರ ಸತ್ಯಾಸತ್ಯತೆ ತಿಳಿಸಲು  ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಬೇಕು,  ಪೊಲೀಸ್ ಇಲಾಖೆ ಅಲರ್ಟ್ ಆಗಬೇಕು.ಅಕ್ರಮ ದ ವಿರುದ್ದ ಧ್ವನಿ ಎಬ್ಬಿಸುವವರಿಗೆ ರಕ್ಷಣೆ ನೀಡಬೇಕು ,   ನೈಸರ್ಗಿಕ ಸಂಪತ್ತನ್ನು ಸಂ ರಕ್ಷಿಸಬೇಕು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top