ಟೈಲರ್ ವೃತ್ತಿ ಮಾಡುತ್ತಿದ್ದ ಮಹಿಳೆ ಇನ್ನು ಸುಳ್ಯದ ಶಾಸಕಿ| ಗದ್ದೆಯಲ್ಲಿ ದುಡಿದು ಅಧಿಕಾರದ ಗದ್ದುಗೆ ಏರಿದ್ರು

ಟೈಲರ್ ವೃತ್ತಿ ಮಾಡುತ್ತಿದ್ದ ಮಹಿಳೆ ಇನ್ನು ಸುಳ್ಯದ ಶಾಸಕಿ| ಗದ್ದೆಯಲ್ಲಿ ದುಡಿದು ಅಧಿಕಾರದ ಗದ್ದುಗೆ ಏರಿದ್ರು

Kadaba Times News

ಕಡಬ ಟೈಮ್ಸ್(KADABA TIMES):ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಭಾಗೀರಥಿ ಮುರುಳ್ಯ ಜಯಭೇರಿ ಭಾರಿಸಿದ್ದಾರೆ.

ಸುಳ್ಯ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ. ಜಿ. ಕೃಷ್ಣಪ್ಪ ರಾಮಕುಂಜ- ಕಾಂಗ್ರೆಸ್-‌ 52730
ಭಾಗೀರಥಿ ಮುರುಳ್ಯ- ಬಿಜೆಪಿ – 79009,ಎಚ್‌ ಎಲ್‌ ವೆಂಕಟೇಶ್‌ – ಜನತಾದಳ- 1559,
ಸುಮನಾ ಬೆಳ್ಳಾರ್ಕರ್-‌ ಆಮ್‌ ಆದ್ಮಿ ಪಕ್ಷ- 1281
,ಗಣೇಶ್‌ ಎಂ – ಕರ್ನಾಟಕ ರಾಷ್ಟ್ರ ಸಮಿತಿ- 261,ರಮೇಶ್‌ ಬೂಡು- ಉತ್ತಮ ಪ್ರಜಾಕೀಯ ಪಾರ್ಟಿ- 466, ಸುಂದರ್‌ ಮೇರ – ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – 334,ಗುರುವಪ್ಪ ಕಲ್ಲುಗುಡ್ಡೆ- ಪಕ್ಷೇತರ-451,
ನೋಟ – 1967

ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಗುರುವ ಮತ್ತು ಕೊರಗು ದಂಪತಿಯ ಪುತ್ರಿಯಾಗಿರುವ ಭಾಗೀರಥಿ, ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದ ಬಳಿಕ ಮಣಿಕ್ಕರ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಾಲ್ಕು ವರ್ಷ ಕಾಲ ಗೌರವ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಹಸು ಸಾಕುವುದರ ಮೂಲಕ ಹೈನುಗಾರಿಕೆಯನ್ನು, ಟೈಲರಿಂಗ್‌ ವೃತ್ತಿಯ ಮೂಲಕ ಸ್ವ-ಉದ್ಯೋಗವನ್ನೂ ಜತೆಯಲ್ಲಿ ಮಾಡುತ್ತಿದ್ದಾರೆ. ಈಗಲೂ ಮನೆಯಲ್ಲಿ ಹೈನುಗಾರಿಕೆಯ ಬಹುಪಾಲು ಕೆಲಸ ಇವರದ್ದೇ. ಮನೆಯಲ್ಲಿ ನಾಲ್ಕು ಹಸುಗಳಿದ್ದು, ಹತ್ತಿರದ ಸೊಸೈಟಿಗೆ ಹಾಲು ಮಾರಾಟ ಮಾಡುತ್ತಾರೆ.

ಆರ್‌ಎಸ್‌ಎಸ್‌ ಹಿನ್ನೆಲೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳಾ ವಿಭಾಗದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಥಮಿಕ ಶಿಕ್ಷಣ ಪಡೆದ ಭಾಗೀರಥಿ ಮುರುಳ್ಯ, ಗ್ರಾಮದ ಮಾಣಿಯಡ್ಕ ಶಿಶುಮಂದಿರದ ಸಂಚಾಲಕಿಯಾಗಿದ್ದರು. ಈಗ ಮುರುಳ್ಯ ರಾಷ್ಟ್ರ ಸೇವಿಕಾ ಸಮಿತಿ ಶಾಖೆಯ ಮುಖ್ಯಶಿಕ್ಷಕಿಯಾಗಿದ್ದಾರೆ. ಇವರು 2000ರಲ್ಲಿ ಎಣ್ಮೂರು ತಾ.ಪಂ.ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದು, ಸುಳ್ಯ ತಾ.ಪಂ.ಸದಸ್ಯರಾಗಿದ್ದರು. 2005ರಲ್ಲಿ ಜಾಲ್ಸೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಗೆದ್ದು ದ.ಕ.ಜಿ.ಪಂ. ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ 3 ಅವಧಿಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top