




ಕಡಬ: ಇಲ್ಲಿನ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕುರಾಲ್ ಪರ್ಬ ಮತ್ತು ಪುದ್ವಾರ್ ಒಣಸ್ ಕಾರ್ಯಕ್ರಮ ಅ.21ರಂದು ನಡೆಯಿತು.
ತುಳುನಾಡಿನಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಗದ್ದೆಯಿಂದ ಭತ್ತದ ತೆನೆಯನ್ನು ತರಕಾರಿಗಳೊಂದಿಗೆ ತಂದು ತುಳಸಿಕಟ್ಟೆಯ ಹತ್ತಿರ ಇಟ್ಟು ಪೂಜೆ ಮಾಡಿ ತೆನೆ ಕಟ್ಟುವ ಕ್ರಮವನ್ನು ವಿದ್ಯಾರ್ಥಿಯ ಮೂಲಕ ಪ್ರಾತ್ಯಕ್ಷಿಕೆಯೊಂದಿಗೆ ಆಚರಿಸಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ನಡೆದಿದ್ದು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್. ದೀಪ ಬೆಳಗಿಸಿದರು. ತೆನೆ ಹಬ್ಬದ ಮಹತ್ವವನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ನೀಡಿದರು. ಹೊಸ ಅಕ್ಕಿ ಊಟದ ಮಹತ್ವವನ್ನು ಶಾಲೆಯ ಸಹಶಿಕ್ಷಕಿ ಸರಿತಾ ಕೆ ರಾಮಕುಂಜರವರು ನೀಡಿದರು. ಮಧ್ಯಾಹ್ನ ಸಂಪ್ರದಾಯದಂತೆ ಮಕ್ಕಳಿಗೆ ಬಾಳೆಎಲೆಯಲ್ಲಿ ವಿವಿಧ ತಿನಿಸುಗಳೊಂದಿಗೆ ಹೊಸ ಅಕ್ಕಿ ಊಟವನ್ನು ನೀಡಲಾಯಿತು.
ಸಭೆಯಲ್ಲಿ ಆಡಳಿತಾಧಿಕಾರಿ ಆನಂದ ಎಸ್.ಟಿ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಲಯದ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ.ಯವರು ವಂದಿಸಿದರು. ಶಾಲೆಯ ಸಹಶಿಕ್ಷಕ ಸುಬ್ರಹ್ಮಣ್ಯ ಸಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.