




ತನಗೆ ಅನ್ನ ಕೊಟ್ಟವನ ಸಾವಿಗೆ ಸಿಂಗಳೀಕವೊಂದು ಕೊರಗುತ್ತಾ ಮುತ್ತು ಕೊಟ್ಟ ದೃಶ್ಯಗಳು ಎಲ್ಲರ ಮನ ಮುಟ್ಟಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ಬಾರೀ ವೈರಲ್ ಆಗಿದೆ.
ಶ್ರೀಲಂಕಾದ ಪೂರ್ವ ಪ್ರಾಂತ್ಯದ ಬಟ್ಟಿಕಲೋವಾ ಜಿಲ್ಲೆಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
56 ವರ್ಷದ ಪೀತಾಂಬರಂ ರಾಜನ್ ಅವರು ಅಕ್ಟೋಬರ್ 17 ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು.ಅವರ ಅಂತಿಮ ದರ್ಶನಕ್ಕೆ ನೂರಾರು ಮಂದಿ ಸಂಬಂಧಿಕರು ಬಂದಿದ್ದ ವೇಳೆ ಸಿಂಗಳೀಕ ಬಂದು ಹಣೆಗೆ ಮುತ್ತಿಟ್ಟು ಅವರನ್ನು ಎಬ್ಬಿಸಲು ಪ್ರಯತ್ನಿಸಿ ಎಲ್ಲರನ್ನೂ ಚಕಿತ ಗೊಳಿಸಿತು.