




ಮಧ್ಯಪ್ರದೇಶದ ಜನ ವಸತಿ ಪ್ರದೇಶಕ್ಕೆ ದೈತ್ಯ ಮೊಸಳೆಯೊಂದು ಭೇಟಿ ನೀಡಿ, ಜನರನ್ನು ದಿಗ್ಬ್ರಮೆಗೊಳಿಸಿದೆ..ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ನದಿಗಳು ಉಕ್ಕಿ ಹರಿಯುತ್ತಿದೆ ಆದ ಕಾರಣ ಪ್ರವಾಹದ ನೀರಿನಲ್ಲಿ ಬಂದ ಮೊಸಳೆ ಜನ ವಸತಿ ಪ್ರದೇಶಕ್ಕೆ ಬಂದಿದೆ.
ಶಿವುಪುರಿ ಜಿಲ್ಲೆಯಲ್ಲಿರುವ ಜನ ವಸತಿ ಪ್ರದೇಶದಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದಿದ್ದು ಇದನ್ನು ಕಂಡು ಅಚ್ಚರಿಗೊಂಡ ಅಲ್ಲಿನ ನಿವಾಸಿಗಳು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.
ವಿಡಿಯೋದಲ್ಲಿ ಮೊಸಳೆ ಮುಖ್ಯ ರಸ್ತೆಯಲ್ಲಿ ಬಂದು ಮನೆಯ ಬಾಗಿಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ ಅಲ್ಲದೆ ಅದನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಪ್ರಯತ್ನಿಸುವ ದೃಶ್ಯಗಳು ಸೆರೆಯಾಗಿವೆ.ಈ ಮೊದಲು ಬಸ್ ನಿಲ್ದಾಣದ ಬಳಿ ಮೊಸಳೆ ಕಂಡು ಕಂಡು ಬಂದಿದ್ದು ಸ್ಥಳೀಯರು ಈ ವಿಚಾರ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ, ಅಲ್ಲದೆ ಪೊಲೀಸ್ ಅಧಿಕಾರಿಗಳು ಕೂಡಲೆ ಮಾಧವ್ ರಾಷ್ಟ್ರೀಯ ಉದ್ಯಾನವನದ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿ ಬಳಿಕ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಒಂದು ಗಂಟೆಯ ಪ್ರಯತ್ನದ ಬಳಿಕ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ರಕ್ಷಣೆ ಮಾಡಿದ ಎಂಟು ಅಡಿಯ ಮೊಸಳೆಯನ್ನು ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿರುವ ಸಾಂಖ್ಯ ಸಾಗರ್ ಸರೋವರದಲ್ಲಿ ಬಿಡಲಾಯಿತು.