ದಕ್ಷಿಣ ಕನ್ನಡದ ಕಡಬದಲ್ಲಿ ಚೂರಿ ಇರಿದ ವ್ಯಕ್ತಿ ಜೈಲುಪಾಲು

ದಕ್ಷಿಣ ಕನ್ನಡದ ಕಡಬದಲ್ಲಿ ಚೂರಿ ಇರಿದ ವ್ಯಕ್ತಿ ಜೈಲುಪಾಲು

Kadaba Times News

ನಮ್ಮ ಇಂಡಿಯಾ ಕನ್ನಡ:   ಪರಸ್ಪರ   ವಾಗ್ವಾದ ನಡೆದು  ಗಲಾಟೆಗೆ ಕಾರಣವಾಗಿ  ವ್ಯಕ್ತಿಯೊಬ್ಬ ಚೂರಿ ಇರಿತಕ್ಕೊಳಗಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ನವಾಜ್  ಚೂರಿ ಇರಿತಕ್ಕೊಳಗಾದ ವ್ಯಕ್ತಿಯಾಗಿದ್ದು  ನೌಫಾಲ್ ಚೂರಿ ಇರಿದ ಆರೋಪಿ.ನವಾಜ್​ ತೀವ್ರ ಗಾಯಗೊಂಡಿದ್ದು, ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಮೊಬೈಲ್​ಗೆ ರಿಚಾರ್ಜ್​ ಮಾಡಿಸಲೆಂದು ಮನೆಯ ಪಕ್ಕದಲ್ಲಿದ್ದ ನೌಫಲ್ ಅಂಗಡಿಗೆ ಹೋಗಿದ್ದು    ಈ ವೇಳೆ ಹಳೆಯ ಘಟನೆಯೊಂದನ್ನು ಕಾರಣವಾಗಿಟ್ಟುಕೊಂಡು ನೌಫಾಲ್​​ ಅವಾಚ್ಯ ಪದಳಿಂದ ಬೈದಿದ್ದಲ್ಲದೇ ನವಾಜ್​ಗೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ನವಾಜ್​ ಚೇರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top