ದಲಿತರ ವಿರುದ್ಧ ದೌರ್ಜನ್ಯ ಹೆಚ್ಚಳ: ನೊಂದು ಕಾಂಗ್ರೆಸ್‌ ಶಾಸಕ ರಾಜೀನಾಮೆ

ದಲಿತರ ವಿರುದ್ಧ ದೌರ್ಜನ್ಯ ಹೆಚ್ಚಳ: ನೊಂದು ಕಾಂಗ್ರೆಸ್‌ ಶಾಸಕ ರಾಜೀನಾಮೆ

Kadaba Times News

 ಕುಡಿಯುವ ನೀರಿನ ಮಡಿಕೆಯನ್ನು ಸ್ಪರ್ಶಿಸಿದ ದಲಿತ ಬಾಲಕ ಶಿಕ್ಷಕನ ಥಳಿತದಿಂದ ಸಾವಿಗೀಡಾದ ಘಟನೆಯನ್ನು ಖಂಡಿಸಿ ರಾಜಸ್ಥಾನದಲ್ಲಿ  ಕಾಂಗ್ರೆಸ್ಶಾಸಕರೊಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ.  

ಪಾನಾ ಚಂದ್ಮೆಘವಾಲ್ರಾಜೀನಾಮೆ ನೀಡಿರುವ ಶಾಸಕ.   ಅವರು ರಾಜೀನಾಮೆಯನ್ನು ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಕಳುಹಿಸಿಕೊಟ್ಟಿದ್ದು, ಕೆಲವು ವರ್ಷಗಳಿಂದ ದಲಿತರ ವಿರುದ್ಧ ರಾಜ್ಯದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿವೆ.ದಲಿತ ಸಮುದಾಯವನ್ನು ರಕ್ಷಿಸಲು ಸಾಧ್ಯವಾಗದೆ ಇರುವುದರಿಂದ ಶಾಸಕನಾಗಿ ಮುಂದುವರಿ ಯುವ ಹಕ್ಕು ತನಗಿಲ್ಲ ಎಂದವರು ತನ್ನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.ರಾಜೀನಾಮೆ ಪ್ರತಿಯನ್ನು ಸ್ಪೀಕರ್ಅವರಿಗೂ ಕಳುಹಿಸಿ ಕೊಟ್ಟಿದ್ದಾರೆ.


ಮಡಿಕೆಯಿಂದ ನೀರು ಕುಡಿಯುವುದು, ಮೀಸೆ ಇರಿಸಿ ಕೊಂಡಿರುವುದು, ಕತ್ತೆಯ ಮೇಲೆ ಸವಾರಿ ಮಾಡುವುದು ಮುಂತಾದ ಕ್ಷುಲ್ಲಕ ಕಾರಣಗಳಿಗಾಗಿ ರಾಜಸ್ಥಾನದಲ್ಲಿ ದಲಿತರನ್ನು ಕೊಲ್ಲಲಾಗುತ್ತಿದೆ. ಇದರ ಬಗ್ಗೆ ಪೊಲೀಸರ ತನಿಖೆಯೂ ಹಳ್ಳ ಹಿಡಿಯುತ್ತಿದೆ ಎಂದು ಮೇಘವಾಲ್ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top