




ಕಡಬ ಟೈಮ್ಸ್(KADABA TIMES):ವಾಲಿಬಾಲ್ ಆಟಗಾರನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿಯ ಬೆಳಾಲು ಗ್ರಾಮದ ಕಾಡಂಡ ಎಂಬಲ್ಲಿ ನಡೆದಿದೆ.
ನವೀನ್ ಗೌಡ ಮೃತ ದುರ್ದೈವಿ ಉತ್ತಮ ವಾಲಿಬಾಲ್ ಪ್ಲೇಯರ್ ಆಗಿದ್ದ ಅವರು, ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕೆಲ ಸಮಯದಿಂದ ಅಸ್ವಸ್ಥರಾಗಿದ್ದ ಇವರು, ಇತ್ತೀಚೆಗೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ, ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.