ಕಡಬ :ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ ಬಿಜೆಪಿಯ ಹಿರಿಯ ಮುಖಂಡ ಇನ್ನಿಲ್ಲ

ಕಡಬ :ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗಾಗಿ ಶ್ರಮಿಸಿದ ಬಿಜೆಪಿಯ ಹಿರಿಯ ಮುಖಂಡ ಇನ್ನಿಲ್ಲ

Kadaba Times News

ಕಡಬ ಟೈಮ್ಸ್(KADABA TIMES):ನೆಲ್ಯಾಡಿ: ಬಿಜೆಪಿ ಹಿರಿಯ ಮುಖಂಡ, ಬಿಜೆಪಿ ಶಿರಾಡಿ ಗ್ರಾಮ ಸಮಿತಿ ಪ್ರಥಮ ಅಧ್ಯಕ್ಷ ಡಿ.ಆರ್.ನಾರಾಯಣ ಗೌಡ(73ವ.)ರವರು ಅಲ್ಪಕಾಲದ ಅಸೌಖ್ಯದಿಂದ ಆ.4ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಶಿರಾಡಿ ಭಾಗದಲ್ಲಿ ಬಿಜೆಪಿಯ ಸಂಘಟನೆ ಮೂಲಕ ಇವರು ಪಕ್ಷದ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ಮಾಜಿ ಸಂಸದರಾದ ಧನಂಜಯಕುಮಾರ್, ಡಿ.ವಿ.ಸದಾನಂದ ಗೌಡ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಎಸ್.ಅಂಗಾರರು ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ವರ ಜೊತೆಗೆ ಓಡಾಡಿ ಶಿರಾಡಿ ಭಾಗದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಮೂಲಕ ಈ ಭಾಗದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ದೊರಕಿಸುವಲ್ಲಿ ಇವರು ಪ್ರಯತ್ನಿಸಿದ್ದರು.

ರಾಜಕೀಯದ ಜೊತೆಗೆ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದರು. ಕಳಪ್ಪಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಟ್ರಸ್ಟ್ನ ಉಪಾಧ್ಯಕ್ಷರಾಗಿ, ಉದನೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಪ್ರಗತಿಪರ ಕೃಷಿಕರೂ ಆಗಿದ್ದರು.

ಮೃತರು ಪತ್ನಿ ದಮಯಂತಿ, ಪುತ್ರರಾದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಕೃಷಿಕ ಸತೀಶ್, ಪುತ್ರಿಯರಾದ ಮನೋಜ, ಮಮತ, ಸಹೋದರರಾದ ಡಿ.ಆರ್.ಸಂಜೀವ ಗೌಡ, ಡಿ.ಆರ್.ಬಾಲಕೃಷ್ಣ ಗೌಡ, ಡಿ.ಆರ್.ತಿಮ್ಮಪ್ಪ ಗೌಡ, ಡಿ.ಆರ್.ಪ್ರಭಾಕರ, ಡಿ.ಆರ್.ರವಿಚಂದ್ರ ಹಾಗೂ ಐವರು ಸಹೋದರಿಯರನ್ನು ಅಗಲಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top