




ಕಡಬ ಟೈಮ್ಸ್(KADABA TIMES):ಸುಳ್ಯ: ಇಲ್ಲಿನ ಕನಕಮಜಲು ಎಂಬಲ್ಲಿ ಯುವಕನೊಬ್ಬ ತಲ್ವಾರ್ ಹಿಡಿದು ಸುತ್ತಾಡಿ ಹುಚ್ಚಾಟ ಮೆರೆದು ಸ್ಥಳೀಯರ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ.
ಪ್ಲಾಸ್ಟಿಕ್ ಬ್ಯಾನರ್ ತೆರವುಗೊಳಿಸಿರುವುದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಹತ್ಯೆಗೀಡಾದ ಬಿಜೆಪಿ ಯುವ ಮುಖಂಡನಿಗೆ ಶ್ರದ್ದಾಂಜಲಿ ಅರ್ಪಿಸಿ ಬ್ಯಾನರ್ ಅಳವಡಿಸಲಾಗಿತ್ತು.

ಪ್ಲ್ಯಾಸ್ಟಿಕ್ ಬ್ಯಾನರ್ ಬಳಸದಂತೆ ಗ್ರಾ.ಪಂ ನಿಂದ ತಿಳಿಸಲಾಗಿತ್ತು, ಆದರೆ ಯುವಕನೊಬ್ಬ ಮತ್ತು ಆತನ ಬಳಗ ಪ್ಲಾಸ್ಟಿಕ್ ಬ್ಯಾನರ್ ಅಳವಡಿಸಿದ್ದರು ಎನ್ನಲಾಗಿದೆ . ಇದನ್ನು ಗ್ರಾ.ಪಂ ಪಂಚಾಯತ್ ನಿರ್ದೇಶನದಂತೆ ತೆರವುಗೊಳಿಸಲಾಗಿದ್ದು, ಇದರಿಂದ ಕೋಪಗೊಂಡ ಈತ ತಲ್ವಾರ್ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ.
ದ.ಕ ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.144 ಸೆಕ್ಷನ್ ಜಾರಿಯಲ್ಲಿದೆ. ಹೀಗಿದ್ದರೂ ಈ ರೀತಿಯ ವರ್ತನೆಯಿಂದ ಜನ ಭಯಭೀತರಾಗಿದ್ದಾರೆ.