




ಕಡಬ ಟೈಮ್ಸ್(KADABA TIMES):ಸುಳ್ಯ/ಕನಕ ಮಜಲು: ತಲ್ವಾರ್ ಹಿಡಿದು ನಡೆದಾಡಿದ ಯುವಕನ ವಿರುದ್ದ ಕೇಸು ದಾಖಲಿಸಿ ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸಂದೀಪ್ ಎಂಬ ಯುವಕ ತಲವಾರು ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲ ಮಾಧ್ಯಮಗಳಲ್ಲಿ ಸುದ್ದಿಗಳು ಬಿತ್ತರವಾಗಿದ್ದವು. ಇದನ್ನು ಗಮನಿಸಿದ ಪೊಲೀಸರು ಆತನ ವಿರುದ್ದ ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಯುವಕ ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಕಳೆದ 8 ತಿಂಗಳಿನಿಂದ ಮದ್ಯಪಾನ ಸೇವನೆ ನಿಲ್ಲಿಸಿದ್ದು, ನಿನ್ನೆಯ ದಿನ ಮದ್ಯಪಾನ ವಾಪಾಸು ಆರಂಭಿಸಿದ ಹಿನ್ನೆಲೆಯಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.
ಜನರು ಯಾವುದೇ ಭಯಭೀತರಾಗುವುದು ಬೇಡ ಎಂದು ಸುಳ್ಯ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.