PUC ಓದುತ್ತಿದ್ದ ಬಾಲಕಿಯ ಮದುವೆ: ಪೋಟೊ ಗ್ರಾಫರ್‌, ಲಗ್ನಪತ್ರಿಕೆ ಮುದ್ರಿಸಿದ ಪ್ರಿಂಟರ್ಸ್,ಅಡುಗೆ ಭಟ್ಟರು ಸೇರಿದಂತೆ ಮನೆಯವರ ಮೇಲೆ ಕೇಸು ದಾಖಲು

PUC ಓದುತ್ತಿದ್ದ ಬಾಲಕಿಯ ಮದುವೆ: ಪೋಟೊ ಗ್ರಾಫರ್‌, ಲಗ್ನಪತ್ರಿಕೆ ಮುದ್ರಿಸಿದ ಪ್ರಿಂಟರ್ಸ್,ಅಡುಗೆ ಭಟ್ಟರು ಸೇರಿದಂತೆ ಮನೆಯವರ ಮೇಲೆ ಕೇಸು ದಾಖಲು

Kadaba Times News

ಕಡಬ ಟೈಮ್ಸ್(KADABA TIMES):ಪಿಯುಸಿ ಓದುತ್ತಿದ್ದ ಬಾಲಕಿಯ ಮದುವೆ ಮಾಡಿಸಿದ್ದ ಸಂಬಂಧಿಕರು, ಮದುವೆ ಗಂಡು, ಪೋಟೋ‌ಗ್ರಾಫರ್, ಅಡುಗೆ ಭಟ್ಟ ಹಾಗೂ ಪುರೋಹಿತರ ಮೇಲೆ ಪ್ರಕರಣ ದಾಖಲಾಗಿದೆ.

ಜುಲೈ 31 ರಂದು ಶಿವಮೊಗ್ಗದ ಸಂತೆಕಡೂರಿನ ಬಾಲಸುಬ್ರಮಣ್ಯ ದೇವಾಲಯದಲ್ಲಿ ಮದುವೆ ನಡೆದಿತ್ತು. ಮದುವೆಯಾದ ಮರುದಿನ ಬೀಗರ ಊಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ದಾಳಿ‌ ನಡೆಸಿದ್ದು,ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಬಾಲಕಿಯ ವಿಚಾರಣೆ ನಡೆಸಿದಾಗ ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಬಾಲಕಿಯು ತನ್ನ ದೂರದ ಸಂಬಂಧಿಯನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಪೋನ್ ನಲ್ಲಿ ಮಾತನಾಡುವಾಗ ಈ ವಿಚಾರ ಬಾಲಕಿಯ ತಂದೆ ತಾಯಿಗೆ ತಿಳಿದು ಗಲಾಟೆಯಾಗಿತ್ತು.ಹಾಗಾಗಿ ಈಕೆಯ ಪ್ರಿಯಕರ  ತಂದೆ ತಾಯಿ ಇಲ್ಲದ ಕಾರಣ ಆತನ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಬಾಲಕಿಯ ಮನೆಗೆ ಬಂದು ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಅಂತೆಯೇ ಇಬ್ಬರ ಮದುವೆ ಜುಲೈ 31 ರಂದು ಮದುವೆ ನಡೆದಿತ್ತು.

ಪ್ರಕರಣ ಸಂಬಂಧ ಮದುವೆ ಮಾಡಿದ ಬಾಲಕಿಯ ತಂದೆ, ತಾಯಿ, ಸಂತೋಷನ ಚಿಕ್ಕಪ್ಪ, ಚಿಕ್ಕಮ್ಮ, ಮದುವೆ ಮಾಡಿದ ಪುರೋಹಿತರು, ಅಡುಗೆ ಭಟ್ಟ, ಲಗ್ನಪತ್ರಿಕೆ ಮುದ್ರಿಸಿದ ಪ್ರಿಂಟರ್ಸ್, ಇಬ್ಬರು ಪೋಟೊ ಗ್ರಾಫರ್‌ ಮೇಲೆ ಈಗ ಎಫ್​ಐಆರ್ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top