




ಕಡಬ ಟೈಮ್ಸ್(KADABA TIMES): ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ, ವಿಪರೀತ ರಕ್ತಸ್ರಾವದಿಂದ ತಾಯಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ನಿವಾಸಿ ಸುಜಾತ(32) ಎಂಬ ಗರ್ಭಿಣಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದವರು.
ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಗೆ ದಾಖಲಾಗಿದ್ದ ಸುಜಾತ ರವರಿಗೆ ವೈದ್ಯರು ಆಪರೇಷನ್ ಮಾಡಿದ್ದು, ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಸುಜಾತರಿಗೆ ವಿಪರೀತ ರಕ್ತಸ್ರಾವ ಉಂಟಾಗಿದೆ ಎನ್ನಲಾಗಿದೆ . ತಕ್ಷಣ ವೈದ್ಯರು ಮಂಗಳೂರು ಆಸ್ಪತ್ರೆಗೆ ಸಾಗಿಸಲು ಸಲಹೆ ನೀಡಿದ್ದಾರೆ.

ಮನೆಯವರು ಆಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸಿದ ವೇಳೆ ಬಾಣಂತಿ ಸಾವನ್ನಪ್ಪಿದ್ದಾರೆ. ಬಾಣಂತಿ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಎಂಬ ಆರೋಪ ಕೇಳಿ ಬರುತ್ತಿದೆ. ಪತಿ ಉದಯ್ ನಾಯ್ಕ್ ಮತ್ತು ಸುಜಾತ ದಂಪತಿಗೆ ಒಂದು ಗಂಡು ಮಗುವಿದ್ದು ಇದೀಗ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.