ಜಾಗದ ವಿಚಾರದಲ್ಲಿ ಮನೆಯೊಳಗೆ ಪ್ರವೇಶಿಸಿ ಹಲ್ಲೆ ಆರೋಪ:ಇಬ್ಬರು ಆಸ್ಪತ್ರೆಗೆ ದಾಖಲು

ಜಾಗದ ವಿಚಾರದಲ್ಲಿ ಮನೆಯೊಳಗೆ ಪ್ರವೇಶಿಸಿ ಹಲ್ಲೆ ಆರೋಪ:ಇಬ್ಬರು ಆಸ್ಪತ್ರೆಗೆ ದಾಖಲು

Kadaba Times News

ಕಡಬ ಟೈಮ್ಸ್(KADABA TIMES): ಜಾಗದ ವಿಷಯವಾಗಿ ವ್ಯಕ್ತಿಯೋರ್ವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕುರುಂಬಲ ನಿವಾಸಿ ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ ಗಾಯಗೊಂಡವರು.

ಜಾಗದ ವಿಷಯವಾಗಿ ಜಗಳ ನಡೆದಿದ್ದು, ಈ ಹಿನ್ನೆಲೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಇಬ್ಬರು  ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡು ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮಾಹಿತಿ ಲಬಿಸಿದೆ.

ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top