




ಕಡಬ ಟೈಮ್ಸ್(KADABA TIMES): ಜೀವನಾಂಶ ಕೋರಿ ಕೋರ್ಟ್ ಮೊರೆ ಹೋದ ಪತಿಯ ನಡೆಯಿಂದ ಆಕ್ರೋಶಗೊಂಡ ಪತಿ ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಕೋರ್ಟ್ ಆವರಣದ ಶೌಚಾಯಲಕ್ಕೆ ಪತ್ನಿ ಚೈತ್ರ ತೆರಳಿದ ವೇಳೆ ಹೊಂಚು ಹಾಕಿ ಕೂತ್ತಿದ್ದ ಪತಿ ಶಿವಕುಮಾರ್ ಆಕೆಯ ಕತ್ತುಕೊಯ್ದು ಕೃತ್ಯವೆಸಗಿದ್ದಾನೆ.
ಸಾವು ಬದುಕಿನ ಹೋರಾಡುತ್ತಿದ್ದ ಗಾಯಾಳು ಚೈತ್ರಳನ್ನು ಹೊಳೆನರಸೀಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚೈತ್ರಾ ಕೊನೆಯುಸಿರೆಳೆದಿದ್ದಾರೆ. ಕತ್ತು ಕೊಯ್ದು ಆರೋಪಿ ಶಿವಕುಮಾರ್ ಎಸ್ಕೇಪ್ ಆಗಿದ್ದು ಸಾರ್ವಜನಿಕರು ಆರೋಪಿ ಬೆನ್ನತ್ತಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಬಗ್ಗೆ ಹೊಳೆನರಸೀಪುರ ಟೌನ್‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ ಏನು?: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚೈತ್ರಾ ಹಾಗು ಹೊಳೆನರಸೀಪುರ ತಾಲೂಕಿನ ಶಿವಕುಮಾರ್ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ ಪತ್ನಿ ನಡುವೆ ಹೊಂದಾಣಿಕೆ ಇಲ್ಲದಿದಕ್ಕೆ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋಗಿದ್ದರು. ಇಂದು ಹೊಳೆನರಸೀಪುರ ಹಿರಿಯ ಸಿವಿಲ್‌ನ್ಯಾಯಲಯದಲ್ಲಿ ರಾಜಿ ಸಂಧಾನ ಮಾತುಕತೆಗಾಗಿ ಬಂದು ಲೋಕ್ ಅದಾಲತ್ ನಲ್ಲಿ ಪತ್ನಿ ಜೊತೆ ಚನ್ನಾಗಿ ಇರುತ್ತೇನೆಂದು ಪತಿ ಶಿವಕುಮಾರ್ ಹೇಳಿಕೆ ಕೊಟ್ಟಿದ್ದ.
ಮಕ್ಕಳಿಬ್ಬರ ಸಲುವಾಗಿ ಹೊಂದಾಣಿಕೆ ಜೀವನ ನಡೆಸುವಂತೆ ವಕೀಲರು ಹಾಗೂ ನ್ಯಾಯಾಧೀಶರು ಸಲಹೆ ಕೊಟ್ಟಿದ್ದರು. ಸಂಧಾನಕ್ಕೆ ಒಪ್ಪಿ ಹೊರ ಬಂದು ಬಳಿಕ ಶೌಚಾಲಯದಲ್ಲಿ ಪತ್ನಿ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.ಪತ್ನಿ ಕೊಂದು ಮಗುವನ್ನು ಹತ್ಯೆ ಮಾಡಲು ಮುಂದಾದಾಗ ಸ್ಥಳದಲ್ಲಿದ್ದವರಿಂದ ಮಗು ರಕ್ಷಣೆ ಮಾಡಲಾಗಿದೆ.