




ಯುವಕ- ಯುವತಿಯನ್ನು ಪತ್ತೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಅದೇ ಕಾಲೇಜಿನ ಏಳು ಜನರ ವಿರುದ್ಧ ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಯುವಕ ಮಹಮ್ಮದ್ ಸನೀಫ್(19) ನೀಡಿದ ದೂರಿನ ಮೇರೆಗೆ
ಸನೀಫ್ ಸುಳ್ಯ ತಾಲೂಕು ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ,ಕಾಂ ಪದವಿಯನ್ನು ಓದುತ್ತಿದ್ದು, ಅದೇ ಕಾಲೇಜಿನ ಯುವತಿಯೋರ್ವಳು ಆತನ ಸ್ನೇಹಿತೆಯಾಗಿದ್ದು, ಅವಳ ಒಟ್ಟಿಗೆ ಮಾತನಾಡುವುದನ್ನು ಕೆಲವರಿಗೆ ಇಷ್ಟವಿಲ್ಲದ ಕಾರಣ ಆ. 30 ರಂದು ಸನೀಫ್ ಕ್ಲಾಸ್ ರೂಂ ನಲ್ಲಿರುವಾಗ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿಗಳು ಕ್ಲಾಸ್ ನಿಂದ ಆತನನ್ನು ಮಾತನಾಡಲಿಕೆಯಿದೆ ಎಂದು ಹೇಳಿ ಕಾಲೇಜಿನ ಗ್ರೌಂಡ್ ಗೆ ಕರೆದುಕೊಂಡು ಹೋಗಿ ಅಲ್ಲೇ ಇದ್ದ ಅದೇ ಕಾಲೇಜಿನ ಇತರ ವಿದ್ಯಾರ್ಥಿಗಳು ಕಲರ್ ಪಟ್ಟಿ ಹಿಡಿದು ಪ್ರಶ್ನಿಸಿ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.