




ಕಡಬ ಟೈಮ್ಸ್(KADABA TIMES): ಶಿರಾಡಿ ಘಾಟ್‌ನಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಇದ್ದರೂ ಪೊಲೀಸರು ಅವಕಾಶ ಕಲ್ಪಿಸಿಕೊಟ್ಟು, ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಈಗ ಆರು ಪೊಲೀಸರ ಅಮಾನತುಮಾಡಿ ಆದೇಶಿಸಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್ ಮತ್ತು ಮಾರನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಎಂದು ತಿಳಿದು ಬಂದಿದೆ. ಹಾಸನ ಎಸ್‌ಪಿ ಹರಿರಾಂ ಶಂಕರ್ ಅಮಾನತು ಆದೇಶ ಹೊರಡಿಸಿದ್ದಾರೆ.

ಭಾರಿ ಮಳೆ ಕಾರಣದಿಂದ ಎರಡು ಕಡೆ ಭೂಕುಸಿತ ಹಾಗೂ ರಸ್ತೆ ಕುಸಿತದಿಂದ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೆ ತುರ್ತು ವಾಹನಗಳನ್ನು ಬಿಟ್ಟು ಎಲ್ಲ ತರಹದ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು.
ಆದರೆ, ಶಿರಾಡಿ ಘಾಟ್ ರಸ್ತೆ ಚೆಕ್‌ಪೋಸ್ಟ್‌ನಲ್ಲಿ ಸಕಲೇಶಪುರ ಗ್ರಾಮಾಂತರ ಠಾಣೆಯ 6 ಪೊಲೀಸ್ ಸಿಬ್ಬಂದಿ ಕರ್ತವ್ಯ ಲೋಪ ಎಸೆಗಿದ್ದರು ಎನ್ನಲಾಗಿತ್ತು.