




ಕಡಬ ಟೈಮ್ಸ್(KADABA TIMES):ದುಷ್ಕರ್ಮಿಗಳಿಂದ ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದ್ದು, ಅವರ ಸಮ್ಮುಖದಲ್ಲೂ ಪ್ರವೀಣ್ ಪತ್ನಿ ನೂತನ ಹಾಗೂ ಮನೆಯವರು ಅಸಮಾಧಾನ ಜೊತೆಗೆ ಆಕ್ರೋಶ ಹೊರಹಾಕಿದ್ದಾರೆ.
ಡಿವಿ ಎಸ್ ಎನ್ಐಎ ಕಚೇರಿ ಬಗ್ಗೆ ಪ್ರಸ್ತಾಪಿಸಿದಾಗ, ಇನ್ನೆಷ್ಟು ಸಮಯ ಬೇಕು ಇದಕ್ಕೆ. ಪಕ್ಷದ ಕಚೇರಿಯಾದರೆ ಬೇಗ ಮಾಡುತ್ತಿರಲಿಲ್ಲವೇ? ಎಂದೂ ಮನೆಯವರು ಪ್ರಶ್ನಿಸಿದರಲ್ಲದೆ ಸಿ.ಎಂ. ಬಂದು ಹೋಗಿ ೨ ದಿವಸ ಆಯಿತು. ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಏನರ್ಥ? ಈ ಘಟನೆಗೆ ನಿಮ್ಮ ಸರಕಾರವೂ ಕಾರಣ,ದಯವಿಟ್ಟು ಒಪ್ಪಿಕೊಳ್ಳಿ ಎಂದು ನೂತನ ಹೇಳಿದರು.

ನಾನು ಎಸ್.ಪಿ.ಯವರೊಂದಿಗೆ ಮಾತನಾಡಿದ್ದೇನೆ. ಎನ್‌ಐಎ ತನಿಖೆಗೂ ಒಪ್ಪಿಸಲಾಗಿದ್ದು, ಸೋಮವಾರ ಗೃಹ ಸಚಿವರನ್ನು ಭೇಟಿ ಮಾಡಲಿದ್ದೇವೆ ಪ್ರವೀಣ್‌ರಿಗೆ ಬೆದರಿಕೆ ಕರೆ ಇತ್ತು. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂಬಂಧಿಗಳು ಹೇಳಿದಾಗ ಈ ಮಾಹಿತಿ ನನಗೆ ಈಗಷ್ಟೇ ಗೊತ್ತಾಯಿತು. ಇದು ಹೌದೇ ಆದಾದರೆ ಇದೊಂದು ಗಂಭೀರ ವಿಷಯ ಎಂದು ಡಿವಿಎಸ್ ಹೇಳಿದರು. ನಿಮ್ಮೂರಿನ ಕಾರ್ಯಕರ್ತನಲ್ಲವೇ? ಮಾಹಿತಿ ಪಡೆದುಕೊಳ್ಳುವುದು ನಿಮ್ಮ ಜವಾಬ್ದಾರಿ ಅಲ್ಲವೇ? ಎಂದು ನೂತನ ಪ್ರಶ್ನಿಸಿದರು.