




ಕಡಬ ಟೈಮ್ಸ್(KADABA TIMES): ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದಲ್ಲಿ ಹಲಸು ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ವಾಹನ ಸಹಿತ, ಮರವನ್ನು ಹಾಗೂ ಮರ ಸಾಗಿಸುತ್ತಿದ್ದ ಮೂವರ ಸಹಿತ ನಾಲ್ಕು ಮಂದಿಯ ಮೇಲೆ ಕೇಸು ದಾಖಲಿಸಿಕೊಂಡ ಘಟನೆ ಜು.೨೯ರಂದು ರಾತ್ರಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ೯ರ ವೇಳೆ ಗಸ್ತು ತಿರುಗುತ್ತಿದ್ದಾಗ ಮರ ಸಾಗಿಸುವ ಮಾಹಿತಿ ಗೊತ್ತಾಗಿ ಮುಂಡೋಳಿಮೂಲೆ ಎಂಬಲ್ಲಿಗೆ ಹೋಗುತ್ತಿದ್ದಂತೆ ಮುಳ್ಯ ಕಜೆ ಎಂಬಲ್ಲಿ ರಸ್ತೆಯಲ್ಲಿ ಸ್ವರಾಜ್ ಮಜ್ದ ವಾಹನದಲ್ಲಿ ಹಲಸು ಮರದ ದಿಮ್ಮಿ ಸಾಗಾಟವಾಗುತ್ತಿರುವುದು ಕಂಡು ಬಂದಿದೆ.
ಈ ಸುದ್ದಿ ಓದಿ:ಗೃಹಸಚಿವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಮುತ್ತಿಗೆ: ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ

ತಕ್ಷಣ ಅರಣ್ಯ ಇಲಾಖೆಯವರು ವಾಹನವನ್ನು ತಡೆದು, ಪರವಾನಿಗೆ ಇಲ್ಲದೆ ಮರ ಸಾಗಿಸುತ್ತಿದ್ದ ಮಹಮ್ಮದ್ ಶಫೀಕ್ ಅಡ್ಕಾರ್, ಸುಂದರ್ ಅಡ್ಕಾರ್, ಫೈಝಲ್ ಅಡ್ಕಾರ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ನೀಡಿದ ಹೇಳಿಕೆಯಂತೆ ಮರ ಸಾಗಾಟದ ಪ್ರಮುಖ ಆರೋಪಿಯೆಂದು ಅಬ್ದುಲ್ ಮಜೀದ್ ನಡುವಡ್ಕರೆಂದು ತಿಳಿದು ಅವರ ಮೇಲೂ ಕೇಸು ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಸುಳ್ಯ ಎ.ಸಿ.ಎಫ್. ಪ್ರವೀಣ್ ಕುಮಾರ್ ಶೆಟ್ಟಿ, ರೇಂಜರ್ ಗಿರೀಶ್ ರ ಮಾರ್ಗದರ್ಶನದ ಮೇರೆಗೆ ಫಾರೆಸ್ಟರ್ ಯಶೋಧರ, ಸಿಬ್ಬಂದಿಗಳಾದ ದೇವಿಪ್ರಸಾದ್, ಲಿಂಗಪ್ಪ, ಗಂಗಾಧರ್, ಪುರುಷೋತ್ತಮ್ ಕಾರ್ಯಾಚರಣೆಯಲ್ಲಿದ್ದರೆಂದು ತಿಳಿದು ಬಂದಿದೆ.