




ಕಡಬ ಟೈಮ್ಸ್(KADABA TIMES):ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ಖ್ಯಾತ ಮಲಯಾಳಂ ನಟ ಶರತ್ ಚಂದ್ರನ್ (೩೭) ಸಾವನ್ನಪ್ಪಿದ್ದಾರೆ.
ಸಾವಿಗೆ ಏನು ಕಾರಣ ಎನ್ನುವುದು ತಿಳಿದು ಬಂದಿಲ್ಲ. ಹೀಗಾಗಿ ಯುವ ನಟನ ಸಾವು ತೀವ್ರ ಆಘಾತ ಹಾಗೂ ಕುತೂಹಲ ಮೂಡಿಸಿದೆ. ಕೊಚ್ಚಿ ಮೂಲದವರಾದ ಶರತ್, ಈ ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರು ಡಬ್ಬಿಂಗ್ ಕಲಾವಿದರಾಗಿ ಚಲನಚಿತ್ರದಲ್ಲಿಯೂ ಕೆಲಸ ಮಾಡಿದರು.
ಅನೀಸ್ಯ ಚಿತ್ರದ ಮೂಲಕ ಚಂದ್ರನ್ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

‘ಅಂಗಮಾಲಿ ಡೈರೀಸ್’, 2017ರಲ್ಲಿ ತೆರೆಗೆ ಬಂದಿದ್ದ ‘ಒರು ಮೆಕ್ಸಿಕನ್ ಅಪರಾಥ’, 2017ರಲ್ಲಿ ರಿಲೀಸ್ ಆಗಿದ್ದ ‘ಸಿಐಎ: ಕಾಮ್ರೇಡ್ ಇನ್ ಅಮೇರಿಕಾ’, 2021ರಲ್ಲಿ ಬಿಡುಗಡೆಯಾಗಿದ್ದ ‘ಒರು ತಾತ್ವಿಕ ಅವಲೋಕನಮ್’ ಮುಂತಾದ ಚಿತ್ರಗಳಲ್ಲಿ ಶರತ್ ಚಂದ್ರನ್ ಅಭಿನಯಿಸಿದ್ದರು.
‘ಅಂಗಮಾಲಿ ಡೈರೀಸ್’ ಚಿತ್ರದಲ್ಲಿ ಶರತ್ ಚಂದ್ರನ್ ಜೊತೆಗೆ ಆಂಥೋನಿ ವರ್ಗೀಸ್ ಕೂಡ ಅಭಿನಯಿಸಿದ್ದರು.